ಕೇರಳದ ಪ್ರಸಿದ್ದ ಆಸ್ಟರ್ ಮೆಮ್ಸ್ ಆಸ್ಪತ್ರೆ ತನ್ನ 20 ನೇ ವಾರ್ಷಿಕೋತ್ಸವ ಅಂಗವಾಗಿ, ಆರ್ಥಿಕವಾಗಿ ದುರ್ಬಲವಾಗಿರುವ ಅನಾರೋಗ್ಯ ಪೀಡಿತ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲಿದೆ.
ಬೆಂಗಳೂರು (ಮಾ. 23): ಕೇರಳದ ಪ್ರಸಿದ್ದ ಆಸ್ಟರ್ ಮೆಮ್ಸ್ ಆಸ್ಪತ್ರೆ ತನ್ನ 20 ನೇ ವಾರ್ಷಿಕೋತ್ಸವ ಅಂಗವಾಗಿ, ಆರ್ಥಿಕವಾಗಿ ದುರ್ಬಲವಾಗಿರುವ ಅನಾರೋಗ್ಯ ಪೀಡಿತ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡಲಿದೆ. 20 ಲಕ್ಷ ರೂ ವೆಚ್ಚದ ಲಿವರ್ ಕಸಿ ಶಸ್ತ್ರಚಿಕಿತ್ಸೆ, 8 ಲಕ್ಷ ವೆಚ್ಚದ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ಆಸ್ಟರ್ ಸಿಇಒ ಫರ್ಹಾನ ಯಾಸೀನ್ ಮಾಹಿತಿ ನೀಡಿದ್ದಾರೆ.