ಟೀವಿ ಮಾಧ್ಯಮದ ಪ್ರತಿಷ್ಠಿತ ಎಕ್ಸ್‌ಚೇಂಜ್4ಮೀಡಿಯಾ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಪ್ರಶಸ್ತಿಗೆ (ENBA) ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿವಿಧ ಕಾರ್ಯಕ್ರಮಗಳು ಭಾಜನವಾಗಿವೆ. ನವದೆಹಲಿಯ ಇಂಪೀರಿಯಲ್ ಹೋಟೆಲ್‌ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ದಕ್ಷಿಣ ಭಾರತದ ನಾಲ್ಕು ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.
ಬೆಂಗಳೂರು (ಮೇ. 01): ಟೀವಿ ಮಾಧ್ಯಮದ ಪ್ರತಿಷ್ಠಿತ ಎಕ್ಸ್‌ಚೇಂಜ್4ಮೀಡಿಯಾ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಪ್ರಶಸ್ತಿಗೆ (ENBA) ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವಿವಿಧ ಕಾರ್ಯಕ್ರಮಗಳು ಭಾಜನವಾಗಿವೆ. ನವದೆಹಲಿಯ ಇಂಪೀರಿಯಲ್ ಹೋಟೆಲ್‌ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ದಕ್ಷಿಣ ಭಾರತದ ನಾಲ್ಕು ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪ್ರಚಲಿತ ವಿದ್ಯಮಾನಗಳ ಸಂಪಾದಕ ಜಯಪ್ರಕಾಶ್ ಶೆಟ್ಟಿಅವರು ದಕ್ಷಿಣ ಭಾರತ ವಿಭಾಗದಲ್ಲಿ ಅತ್ಯುತ್ತಮ ನಿರೂಪಕ ಪ್ರಶಸ್ತಿ ಗಳಿಸಿದ್ದಾರೆ. ಅಲ್ಲದೆ, ಅವರಿಗೆ ದಕ್ಷಿಣ ಭಾರತ ಬೆಸ್ಟ್ ಕರೆಂಟ್ ಅಫೇರ್ಸ್ನಲ್ಲೂ ಚಿನ್ನದ ಪದಕ ಲಭಿಸಿದೆ. ಇದಲ್ಲದೆ, ಬೆಸ್ಟ್ ನ್ಯೂಸ್ ಕವರೇಜ್‌ನಲ್ಲಿ ‘ಬಿಗ್ 3’ ಕಾರ್ಯಕ್ರಮ ನಿರ್ಮಾಪಕ ಜೀವನ್ ರಾಜ್ ಅವರಿಗೆ ಚಿನ್ನ ಮತ್ತು ಕವರ್ ಸ್ಟೋರಿ ಕಾರ್ಯಕ್ರಮಕ್ಕೆ ರವಿ ಕುಮಾರ್ ಅವರಿಗೆ ಬೆಳ್ಳಿ ಪದಕ ಲಭಿಸಿದೆ.