ಮತ್ತೊಂದು ಹಗರಣ ಬಯಲು! RTOನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಸರ್ಕಾರದ ಮೌನ?

ಮತ್ತೊಂದು ಹಗರಣ ಬಯಲು! RTOನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಸರ್ಕಾರದ ಮೌನ?

Published : Jul 05, 2022, 12:50 PM IST

ರಾಜ್ಯದ ಆರ್‌ಟಿಒ ಕಚೇರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಕತ್ತರಿ ಹಾಕಲಾಗುತ್ತಿದೆ. ಆದರೆ ಸರ್ಕಾರ ಮಾತ್ರ ಈ ವಿಚಾರದಲ್ಲಿ ಮೌನವಾಗಿ ಕುಳಿತುಕೊಂಡಿದೆ.

ಬೆಂಗಳೂರು (ಜುಲೈ 5): ಆದಾಯ ತರುವಂಥ ಇಲಾಖೆಯಲ್ಲಿಯೇ ಬ್ರಹ್ಮಾಂಡ ಭ್ರಷ್ಟಾಚಾರ ವರದಿಯಾಗಿದೆ.  ತೆರಿಗೆ ಕಟ್ಟಿಸಿಕೊಳ್ಳದೆ ಸರ್ಕಾರಕ್ಕೆಕೋಟಿ ಕೋಟಿ ವಂಚನೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಭಾವಿಗಳ ತೆರಿಗೆ ವಂಚನೆಗೆ ಸರ್ಕಾರಿ ಅಧಿಕಾರಿಗಳೇ ಇಲ್ಲಿ ಸಾಥ್‌ ನೀಡಿದ್ದಾರೆ.

ರಾಜ್ಯದ ಆರ್‌ಟಿಒ (RTO Office) ಕಚೇರಿಯಿಂದಲೇ ಸರ್ಕಾರಕ್ಕೆ ಮಹಾಮೋಸವಾಗಿರುವ ಪ್ರಕರಣ ವರದಿಯಾಗಿದೆ. ಐಷಾರಾಮಿ ಕಾರುಗಳ ಲೈಫ್‌ ಟ್ಯಾಕ್ಸ್ (Life Tax), ಸೆಸ್‌ ಪಾವತಿಸದೆ ವಂಚನೆ ಮಾಡಿರುವ ಘಟನೆ ನಡೆದಿದೆ. ರಾಜ್ಯದ ಬೇರೆ ಬೇರೆ ಆರ್‌ಟಿಓ ಕಚೇರಿಗಳಲ್ಲಿ ಈ ವಂಚನೆ ನಡೆದಿದೆ. ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟಿಸಿಕೊಳ್ಳದೆ ನೋಂದಣಿ ಮಾಡಿಕೊಳ್ಳಲಾಗಿದೆ.

ಸಾರಿಗೆ ಇಲಾಖೆಯ ಆನ್‌ಲೈನ್ ವಾಹನ ಸೇವೆಗೆ ಅಧಿಕಾರಿಗಳ ವಿರೋಧ: 1.7 ಲಕ್ಷ ಅರ್ಜಿಗಳ ವಿಲೇವಾರಿ ಬಾಕಿ

ತೆರಿಗೆ ವಂಚನೆಯಲ್ಲಿ ಕಾರು ಮಾಲೀಕರಿಗೆ ಅಧಿಕಾರಿಗಳು ಸಾಥ್‌ ನೀಡಿದ್ದಾರೆ. ಒಟ್ಟಾರೆ ಅರ್‌ಟಿಓ ಕಚೇರಿಯಿಂದ 100 ಕೋಟಿ ರೂಪಾಯಿ ತೆರಿಗೆ ವಂಚನೆ ಆಗಿರುವ ಮಾಹಿತಿ ಸಿಕ್ಕಿದೆ.
ಕೋರಮಂಗಲ ಆರ್‌ಟಿಒನಲ್ಲಿ 100 ಕಾರುಗಳಿಂದ ತೆರಿಗೆ ವಸೂಲಿ ಮಾಡದೆ ಅಧಿಕಾರಿಗಳು ನೋಂದಣಿ ಮಾಡಿದ್ದಾರೆ.  ಆದರೆ, ಆರ್‌ಟಿಓ ಕಚೇರಿಗಳ ಮಹಾಮೋಸಕ್ಕೆ ಸರ್ಕಾರ ದಿವ್ಯ ಮೌನ ವಹಿಸಿದೆ. ತೆರಿಗೆ ವಂಚನೆಗೆ ಸಹಕರಿಸಿದವರಿಗೆ ಸರ್ಕಾರ ಶಿಕ್ಷೆ ನೀಡೋದಿಲ್ವಾ? ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ಸರ್ಕಾರ ನಿಂತಿದೆಯೇ ಎನ್ನುವ ಅನುಮಾನ ಕಾಡಿದೆ. 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more