
ಬೆಂಗಳೂರು (ಆ.21): ಬಹುದಿನಗಳಿಂದ ಕುತೂಹಲ ಮೂಡಿಸಿದ್ದ 'ಅನನ್ಯಾ ಭಟ್ ಮಿಸ್ಸಿಂಗ್ ಮಿಸ್ಟರಿ' ಪ್ರಕರಣವು ಇದೀಗ ಪಕ್ಕಾ ಸಿನಿಮಾ ಕಥೆಯಂತೆ ತಿರುವು ಪಡೆದುಕೊಂಡಿದೆ. ಇದು ಹುಟ್ಟು ಸುಳ್ಳು, ಫೋಟೋ ಸುಳ್ಳು ಮತ್ತು ಒಂದು ದೊಡ್ಡ ಷಡ್ಯಂತ್ರದ ಭಾಗ ಎಂದು ವರದಿಗಳು ಬಹಿರಂಗಪಡಿಸಿವೆ. ಈ ಇಡೀ ಬುರುಡೆ ಕಥೆಯ ಸೂತ್ರಧಾರ ತಮಿಳುನಾಡಿನ ಸಂಸದ ಎಂದು ಬಿಜೆಪಿ ಆರೋಪಿಸಿದ್ದು, ಈ ಆರೋಪ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಹಣದಾಸೆಗೆ ಹೆಣ್ಣು-ಹೆಣ ಕಥೆ? ಅನನ್ಯಾ ಭಟ್ – ಸುಜಾತ ರಹಸ್ಯ ಬಯಲಿಗೆ!
ಅನನ್ಯಾ ಭಟ್ ಎಂಬುವವರನ್ನು ತನ್ನ ಮಗಳು ಎಂದು ಹೇಳಿಕೊಂಡಿದ್ದ ಸುಜಾತಾ ಭಟ್, ಆಕೆಯ ಫೋಟೋ ತೋರಿಸಿ ಈ ಪ್ರಕರಣವನ್ನು ಮುನ್ನೆಲೆಗೆ ತಂದಿದ್ದರು. ಆದರೆ, 'ಸುಳ್ಳಿನ ಸಾಮ್ರಾಜ್ಯ' ಎಂದು ಬಣ್ಣಿಸಲಾದ ಈ ಕಥೆಯಲ್ಲಿ ಅನನ್ಯಾ ಭಟ್ ಹುಟ್ಟೇ ಇಲ್ಲ ಎಂದು ಸುಜಾತಾ ಭಟ್ ಅವರ ಬಾವನೇ ಹೇಳಿಕೆ ನೀಡಿದ್ದಾರೆ.
ಸುಜಾತಾ ಭಟ್ ಅವರು 2003ರಲ್ಲಿ ಕೊಲ್ಕತ್ತಾದಲ್ಲಿ ಸಿಬಿಐ ಸ್ಟೆನೋಗ್ರಾಫರ್ ಆಗಿದ್ದೆ ಎಂದು ಹೇಳಿಕೊಂಡರೆ, ಆ ಸಮಯದಲ್ಲಿ ಅವರು ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿದ್ದರು ಮತ್ತು ಅವರಿಗೆ ಮಕ್ಕಳಿರಲಿಲ್ಲ ಎಂದು ಸಾಕ್ಷಿಗಳು ಹೇಳುತ್ತಿವೆ.