2 ಲಕ್ಷ ರೂ ಲಂಚ ಪಡೆಯುವಾಗ ಕೆಐಎಡಿಬಿ ಅಧಿಕಾರಿ ತೇಜಸ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ರೈತರ ಜಮೀನಿಗೆ ಬೆಲೆ ನಿಗದಿ ಮಾಡಬೇಕಿದ್ದ ಕೆಐಎಡಿಬಿ ಅಧಿಕಾರಿ ತೇಜಸ್ ರೈತರಿಂದ 10 ಲಕ್ಷದವರೆಗೆ ಲಂಚ ಪಡೆದಿದ್ದ.
ಬೆಂಗಳೂರು (ಸೆ. 21): 2 ಲಕ್ಷ ರೂ ಲಂಚ ಪಡೆಯುವಾಗ ಕೆಐಎಡಿಬಿ ಅಧಿಕಾರಿ ತೇಜಸ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಚಿಂತಾಮಣಿಯಲ್ಲಿ ರೈತರಿಂದ ಸರ್ಕಾರ ಜಮೀನು ಖರೀದಿಸಿತ್ತು. ರೈತರ ಜಮೀನಿಗೆ ಬೆಲೆ ನಿಗದಿ ಮಾಡಬೇಕಿದ್ದ ಕೆಐಎಡಿಬಿ ಅಧಿಕಾರಿ ತೇಜಸ್ ರೈತರಿಂದ 10 ಲಕ್ಷದವರೆಗೆ ಲಂಚ ಪಡೆದಿದ್ದ. ಈತನ ಲಂಚಾವತಾರ ಕಂಡು ರೈತರು ಕಂಗಾಲಾಗಿ ಹೋಗಿದ್ದರು.