Chitradurga: ದುರ್ಗದಲ್ಲಿ ಮಿನಿ ಸ್ಪೈಡರ್ ಮ್ಯಾನ್ ಗಳನ್ನು ಹುಟ್ಟಿಹಾಕಲು ಜ್ಯೋತಿರಾಜ್ ಪ್ರಯತ್ನ

Dec 28, 2021, 2:20 PM IST

ಚಿತ್ರದುರ್ಗ (ಡಿ. 28): ಯಾವುದೇ ಅಪರೂಪದ ಕಲೆಯಾಗಲಿ, ವಿದ್ಯೆಯನ್ನಾಗಲಿ ಕಲಿತ ಗುರುಗಳು, ಅದು ನಶಿಸಿಹೋಗುವ ಮುನ್ನ ಮತ್ತೊಬ್ಬರಿಗೆ ಧಾರೆ ಎರೆಯುವ ಸಂಪ್ರದಾಯ ಇಂದು ನಿನ್ನೆಯದಲ್ಲ. ಅಂತೆಯೇ ಕೋಟೆನಾಡಿನ (Chitradurga) ಸ್ಪೈಡರ್ ಮ್ಯಾನ್ ಕೋತಿರಾಜ್ (Kothiraj) ತನ್ನ ಕೌಶಲ್ಯವನ್ನು ತನ್ನ ಶಿಷ್ಯರಿಗೆ  ಕಲಿಸುವ ಮೂಲಕ ತನ್ನ ಕನಸನ್ನು‌ ನನಸಾಗಿಸಿಕೊಳ್ಳಲು ಮುಂದಾಗಿದ್ದಾರೆ. 

 ಚಿಕ್ಕಂದಿನಿಂದಲೂ ಕೋಟೆಯಲ್ಲಿಯೇ ಕಲ್ಲುಗಳು ಹಾಗೂ ಕೋತಿಗಳೊಂದಿಗೆ ತನ್ನ ಬದುಕು ಕಟ್ಟಿಕೊಂಡಿರೋ ಚಿತ್ರದುರ್ಗದ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್, ಜೋಗಫಾಲ್ಸ್ ಗೆ (Jog Falls) ಇಳಿದು ಕಾಲು ಜಾರಿಬಿದ್ದು, ಅದೃಷ್ಟವಶಾತ್ ಮರುಜನ್ಮ ಪಡೆದು ಬದುಕಿ ಬಂದಿದ್ದರು. ಬಳಿಕ ಅಮೇರಿಕಾದ ಏಂಜಲ್ ಫಾಲ್ಸ್‌ ಹತ್ತುವ ಕನಸಿನೊಂದಿಗೆ ಒಲಂಪಿಕ್ಸ್ ನಲ್ಲಿ (Olympics)  ಭಾರತದ ಪರವಾಗಿ ಸ್ಪರ್ಧಿಸಿ, ಪದಕ ಗೆಲ್ಲುವ ಕನಸು ಸಹ ಕನಸಾಗಿಯೇ‌ ಉಳಿದಿದೆ. ಹೀಗಾಗಿ ತನ್ನ ಕಲೆ ನಶಿಸಿ ಹೋಗುವ ಮುನ್ನ ತನ್ನಂತೆ ದುರ್ಗದಲ್ಲಿ ಮಿನಿ ಸ್ಪೈಡರ್ ಮ್ಯಾನ್ ಗಳನ್ನು ಹುಟ್ಟಿಹಾಕಲು ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮುಂದಾಗಿದ್ದಾರೆ. ತನ್ನ ಸ್ವಂತ ಖರ್ಚಿನಲ್ಲಿ,ಅನಾಥ ಮಕ್ಕಳನ್ನು ಗುರುತಿಸಿ ರಾಕ್ ಕ್ಲೈಂಬಿಗ್‌ (Rock Climbling) ತರಬೇತಿ ನೀಡುವ ಮೂಲಕ ಭಾರತಕ್ಕೆ ಒಲಂಪಿಕ್ಸ್ ನಲ್ಲಿ ಪದಕ ಗೆದ್ದೇ ಗೆಲ್ತೇವೆಂಬ ಆಶಾಭಾವ ಹೊಂದಿದ್ದಾರೆ.

Vanivilas Reservoir Chitradurga: 60 ವರ್ಷಗಳ ಬಳಿಕ ಜಲಾಶಯ ಭರ್ತಿ, ರೈತರ ಮೊಗದಲ್ಲಿ ಮಂದಹಾಸ

ಇನ್ನೂ ಕೋತಿರಾಜ್‌ ಮನೆಯಲ್ಲಿಯೇ ಆಶ್ರಯ ಪಡೆದಿರೋ 13 ಜನ ನಿರ್ಗತಿಕ ಯುವಕರು, ಗುರುವಿನ ಮಾದರಿಯಲ್ಲೇ ಕೋಟೆ ಏರಿ ಎಲ್ಲರ‌ಗಮನ ಸೆಳೆಯುತಿದ್ದಾರೆ. ಉತ್ತಮ  ತರಬೇತಿ ಪಡೆದ ಕೆಲವರು ಈಗಾಗಲೇ ರಾಷ್ಟ್ರ ಮಟ್ಟದ ಬಂಗಾರದ ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ‌ ತಂದಿದ್ದಾರೆ. ಗುರುವಿನ ಬಯಕೆಯಂತೆ‌ ಒಲಂಪಿಕ್ಸ್ ನಲ್ಲಿ ಭಾಗವಹಿಸಲು ತರಬೇತಿ ಪಡೆಯುತಿದ್ದೂ, ಸರ್ಕಾರದಿಂದ ನಮ್ಮ‌ ತರಬೇತಿಗಾಗಿ ಒಂದು ನೇರ ಗೋಡೆಯನ್ನು ನಿರ್ಮಿಸಿಕೊಟ್ಟರೆ ಅನುಕೂಲವಾಗಲಿದೆ ಎಂದು ಮನವಿ ಮಾಡ್ತಾರೆ.

ತಮ್ಮ ಶಿಷ್ಯರ ಮೂಲಕ ಭಾರತಕ್ಕೆ ಒಲಂಪಿಕ್ಸ್‌ನಲ್ಲಿ ಪದಕ ಗೆಲ್ಲಿಸುವ ಮೂಲಕ ತಮ್ಮ‌ಕನಸನ್ನು ನನಸಾಗಿಸಿಕೊಳ್ಳಲು ನೀಡ್ತಿರುವ ತರಬೇತಿ ಯಶಸ್ವಿಯಾಗಲಿ ಅನ್ನೋದು ಕೋಟೆನಾಡಿನ ಜನರ ಆಶಯ..