* ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ತೆಲುಗು ಯೋಧಾಸ್
* ಅಲ್ಟಿಮೇಟ್ ಖೋ ಖೋ ಲೀಗ್ ಫೈನಲ್‌ನಲ್ಲಿ ತೆಲುಗು ಯೋಧಾಸ್ - ಒಡಿಶಾ ಜುಗರ್‌ನಟ್ಸ್ ಫೈಟ್
* ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ಯೋಧಾಸ್‌ಗೆ ಗೆಲುವು
* ತೆಲುಗು ಯೋಧಾಸ್‌ಗೆ ಗುಜರಾತ್ ಜೈಂಟ್ಸ್ ಎದುರು 67-44 ಅಂಕಗಳ ಜಯಭೇರಿ
* 23 ಅಂಕಗಳ ಅಂತರದ ಗೆಲುವು ಸಾಧಿಸಿದ ತೆಲುಗು ಯೋಧಾಸ್
ಪುಣೆ(ಸೆ.04): ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಎರಡನೇ ತಂಡವಾಗಿ ತೆಲುಗು ಯೋಧಾಸ್ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿ ತೆಲುಗು ಯೋಧಾಸ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.
ಗುಜರಾತ್ ಜೈಂಟ್ಸ್ ತಂಡವು ಸತತ ಎರಡು ಸೋಲು ಅನುಭವಿಸುವ ಮೂಲಕ ಅಲ್ಟಿಮೇಟ್ ಖೋ ಖೋ ಟೂರ್ನಿಯಿಂದ ಹೊರಬಿದ್ದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದೀಗ ಫೈನಲ್‌ನಲ್ಲಿ ಒಡಿಶಾ ಜುಗರ್‌ನಟ್ಸ್ ಹಾಗೂ ತೆಲುಗು ಯೋಧಾಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಎರಡನೇ ಕ್ವಾಲಿಫೈಯರ್ ಪಂದ್ಯದ ಹೈಲೈಟ್ಸ್ ಹೀಗಿತ್ತು ನೋಡಿ