6 ಮಂದಿಗೆ ಕಾಮನ್ವೆಲ್ತ್‌ ಪದಕ, ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಅಥ್ಲೀಟ್‌ಗಳಿಗೆ ಭರ್ಜರಿ ಸ್ವಾಗತ!

6 ಮಂದಿಗೆ ಕಾಮನ್ವೆಲ್ತ್‌ ಪದಕ, ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಅಥ್ಲೀಟ್‌ಗಳಿಗೆ ಭರ್ಜರಿ ಸ್ವಾಗತ!

Published : Aug 09, 2022, 04:10 PM IST

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆದ 9 ಅಥ್ಲೀಟ್‌ಗಳ ಪೈಕಿ 6 ಮಂದಿ ಪದಕ ಜಯಿಸಿದ್ದಾರೆ. ಇವುಗಳ ಪೈಕಿ ಮೂವರು ಬೆಂಗಳೂರಿಗೆ ವಾಪಸಾಗಿದ್ದು ಸಾಯ್‌ ಕೇಂದ್ರದಲ್ಲಿ ಸಂಭ್ರಮ ಮನೆ ಮಾಡಿದೆ.

ಬೆಂಗಳೂರು (ಆ.9): ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ಮುಕ್ತಾಯಗೊಂಡ ಕಾಮನ್ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿದೆ. ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ತರಬೇತಿ ಪಡೆದ 9 ಅಥ್ಲೀಟ್‌ಗಳು ಕೂಟದಲ್ಲಿ ಭಾಗವಹಿಸಿದ್ದರು. ಇದರಲ್ಲಿ 6 ಅಥ್ಲೀಟ್‌ಗಳು ಪಕದ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಮೂವರು ಈಗಾಗಲೇ ಬೆಂಗಳೂರಿಗೆ ವಾಪಸಾಗಿದ್ದಾರೆ. 

ಅಥ್ಲೀಟ್‌ಗಳಾದ ಅವಿನಾಶ್ ಸಬ್ಲೆ, ಎಲ್ದೋಸ್‌ ಪೌಲ್‌ ಹಾಗೂ ಅಬ್ದುಲ್ಲಾ ಮಂಗಳವಾರ ಬೆಂಗಳೂರಿನ ಸಾಯ್‌ ಕೇಂದ್ರಕ್ಕೆ ಆಗಮಿಸಿದರು. ಇವರಿಗೆ ಕೇಂದ್ರದಲ್ಲಿ ಅದ್ದೂರಿಯಾಗಿ ಸ್ವಾಗತ ನೀಡಲಾಗಿದೆ. ನಾಗರಭಾವಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಸಹ ಅಥ್ಲೀಟ್‌ಗಳು ಡಾನ್ಸ್‌ ಮಾಡಿ ಅಥ್ಲೀಟ್‌ಗಳ ಯಶಸ್ಸನ್ನು ಸಂಭ್ರಮಿಸಿದರು. 

ಕಾಮನ್ವೆಲ್ತ್‌ನಲ್ಲಿ ಭಾರತ ಕಮಾಲ್‌, ಶೂಟಿಂಗ್‌, ಆರ್ಚರಿ ಇಲ್ಲದಿದ್ದರೂ 61 ಪದಕ ಗೆದ್ದ ಸಾಧನೆ!

ಅವಿನಾಶ್‌ ಸಬ್ಲೆ ಪುರುಷರ 3 ಸಾವಿರ ಮೀಟರ್‌ ಓಟದಲ್ಲಿ ಬೆಳ್ಳಿ ಜಯಿಸಿದರೆ, ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ಸ್ವರ್ಣ ಪದಕ ವಿಜೇತ ಎಲ್ದೋಸ್‌ ಪೌಲ್ ಮತ್ತು ಇದೇ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಅಬ್ದುಲ್ಲಾ ಅಬೂಬಕರ್‌ಗೆ ಸಾಯ್‌ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ.  ಈ ಮೂವರ ಜೊತೆ 10 ಸಾವಿರ ಮೀಟರ್​​ ನಡಿಗೆಯಲ್ಲಿ ಕಂಚಿನ ಪದಕ ಗೆದ್ದ ಸಂದೀಪ್​, ಮಹಿಳೆಯರ ವಿಭಾಗದಲ್ಲಿ ಬೆಳ್ಳಿ ಗೆದ್ದ ಪ್ರಿಯಾಂಕ ಗೋಸ್ವಾಮಿ ಮತ್ತು  ಪುರುಷರ ಲಾಂಗ್ ಜಂಪ್​​ನಲ್ಲಿ ಬೆಳ್ಳಿ ಪದಕ ಗೆದ್ದ ಮುರಳಿ ಶ್ರೀಶಂಕರ್ ಸಹ ತವರಿಗೆ ವಾಪಾಸ್ ಆಗಿದ್ದಾರೆ.

01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
03:5611 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
03:25ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
03:26ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!
Read more