ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ

Sep 2, 2023, 12:03 PM IST

ಚಂದ್ರಯಾನ 3 ಬಳಿಕ ಸೂರ್ಯ ಶಿಕಾರಿಗೆ ಇಸ್ರೋ ಸಜ್ಜಾಗಿ, ಸೂರ್ಯನತ್ತ(Sun) ಆದಿತ್ಯ L-1 ಉಡಾವಣೆ(Aditya L-1) ಮಾಡಿದೆ. ಇಂದು ಶ್ರೀಹರಿಕೋಟಾದಿಂದ(Sriharikota) ರಾಕೆಟ್ ಉಡಾವಣೆಯಾಗಿದೆ. ಆದಿತ್ಯ L-1ಗಾಗಿ ಬೆಂಗಳೂರು ಮೂಲದ ಸಂಸ್ಥೆ IIA ಪೇಲೋಡ್ ತಯಾರಿಸಿದೆ. ಪೇಲೋಡ್ ತಂತ್ರಜ್ಞಾನದಿಂದ ಸೂರ್ಯಗ್ರಹಣ ಸೃಷ್ಟಿ ಮಾಡಲಾಗಿದೆ. ಸೂರ್ಯ ಗ್ರಹಣವಾದಾಗ ಮಾತ್ರ ಅಧ್ಯಯನ ಸಾಧ್ಯವಾಗಿದ್ದು, ದು. ಸೂರ್ಯನ ಶಕ್ತಿಶಾಲಿ ಕಿರಣಗಳ ಅವಲೋಕನ, ಸೂರ್ಯನ ಅಧ್ಯಯನಕ್ಕೆ 7 ಪೆಲೋಡ್‌ಗಳ ಅಳವಡಿಕೆ ಮಾಡಲಾಗಿದೆ. ಬೆಂಗಳೂರಿನ IIA ಸಂಸ್ಥೆಯಲ್ಲಿ ಪೆಲೋಡ್‌ಗಳು ತಯಾರಾಗಿವೆ. ಸೂರ್ಯನ ತಾಪಮಾನ, ಸೌರ ಜ್ವಾಲೆಯ ಅಧ್ಯಯನವನ್ನು ಆದಿತ್ಯ ನಡೆಸಲಿದೆ. ಪ್ರತಿನಿತ್ಯ ಸೂರ್ಯನ 1440 ಫೋಟೋವನ್ನು ಆದಿತ್ಯ ತೆಗೆಯಲಿದೆ.ಸೂರ್ಯನ ಮೇಲ್ಮೈನಿಂದ  ಹೊರಬರುವ ಕಿರಣದ ಅಧ್ಯಯನ ನಡೆಸಲಾಗುವುದು. ಪೇಲೋಡ್ ಉಪಕರಣದಿಂದ 24 ಗಂಟೆಯೂ ಸೂರ್ಯಗ್ರಹಣ ಆಗಿದ್ದು, ಪೇಲೋಡ್ ಮೂಲಕ ಸೂರ್ಯನ ಅಧ್ಯಯನ ಸುಲಭ ಎನ್ನಲಾಗ್ತಿದೆ. ಸೂರ್ಯನಿಂದ ಹೊರಬರೋ ಸೌರ ಜ್ವಾಲೆ, ಕಣಗಳ ಅಧ್ಯಯನ ಮಾಡಲಾಗುವುದು.

ಇದನ್ನೂ ವೀಕ್ಷಿಸಿ:  KBJNL ಶಿಫ್ಟ್‌ಗೆ ಆದೇಶವಿದ್ರೂ ಎಂಡಿ ಕಳ್ಳಾಟ: ಬೆಂಗಳೂರಿನ ಕಚೇರಿಗೆ ವಿಜಯಪುರ ರೈತರ ಅಲೆದಾಟ