ಗೆಳೆಯರ ಆಯ್ಕೆಯ ಬಗ್ಗೆ ಎಚ್ಚರದಿಂದಿರಿ, ಏನಿದು ರಶ್ಮಿಕಾ ಮಂದಣ್ಣ ಗೂಡಾರ್ಥ?

ಗೆಳೆಯರ ಆಯ್ಕೆಯ ಬಗ್ಗೆ ಎಚ್ಚರದಿಂದಿರಿ, ಏನಿದು ರಶ್ಮಿಕಾ ಮಂದಣ್ಣ ಗೂಡಾರ್ಥ?

Published : May 05, 2025, 04:55 PM IST

ರಶ್ಮಿಕಾ ಮಂದಣ್ಣ ಗೆಳೆಯರ ಆಯ್ಕೆ ಬಗ್ಗೆ ಸಲಹೆ ನೀಡಿದ್ದಾರೆ. ತಂದೆತಾಯಿಯರ ಮಾತು ಕೇಳಿ, ಅವರನ್ನು ನಂಬಿ ಎಂದು ಹೇಳಿದ್ದಾರೆ. ಈ ಪೋಸ್ಟ್ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸ್ಯಾಂಡಲ್​ವುಡ್​​ನ ಕಿರಿಕ್ ಪಾರ್ಟಿ ಸಿನಿಮಾದಿಂದ ಬಣ್ಣದ ಲೋಕಕ್ಕೆ ಬಂದ ಚೆಲುವೆ ಇವತ್ತು ಇಂಡಿಯನ್ ಸಿನಿಇಂಡಸ್ಟ್ರಿಯ ಟಾಪ್ ನಟಿಮಣಿ. ವೃತ್ತಿ ಬದುಕಲ್ಲಿ ಎಷ್ಟೇ ಎತ್ತರಕ್ಕೆ ಹೋದ್ರೂ ರಶ್ಮಿಕಾ ಪರ್ಸನಲ್ ಲೈಫ್​ನಲ್ಲಿ ಹಲವು ಏರು ಪೇರು ಎದುರಾದವು. ಆದ್ರೆ ರಶ್ಮಿಕಾ ಯಾವತ್ತೂ ಕುಗ್ಗಿಲ್ಲ. ಸದಾ ಉತ್ಸಾಹದ ಚಿಲುಮೆಯಂತೆ ಮುನ್ನುಗ್ತಾನೆ ಇರ್ತಾರೆ ಈ ಕೂರ್ಗ್ ಬ್ಯೂಟಿ. ಆದ್ರೆ ಇತ್ತೀಚಿಗೆ ರಶ್ಮಿಕಾ ಹಾಕಿದ ಒಂದು ಪೋಸ್ಟ್  ಪರ್ಸನಲ್ ಲೈಫ್ ಬಗ್ಗೆ ನಾನಾ ಪ್ರಶ್ನೆಗಳನ್ನ ಹುಟ್ಟಿಹಾಕಿದೆ.
 
ಇವತ್ತಿನ ನಿಮ್ಮ ಫ್ರೆಂಡ್ಸ್​ ನಾಳೆ ನಿಮ್ಮವರಾಗಿರಲ್ಲ. ಹಾಗಾಗಿ ಯಾರನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದು ತುಂಬಾ ಮುಖ್ಯ. ನಿಮ್ಮ ತಂದೆ ತಾಯಿಯನ್ನ ಗೌರವಿಸಿ. ಜಗತ್ತಿನಲ್ಲಿ ಯಾರು ಪ್ರೀತಿ ಮಾಡದಷ್ಟು ಅವರು ನಿಮ್ಮನ್ನು ಪ್ರೀತಿ ಮಾಡ್ತಾರೆ. ಅವರ ಮಾತು ಕೇಳಿ ಮತ್ತು ಅವರನ್ನ ನಂಬಿ. ಅಪ್ಪ, ಅಮ್ಮನನ್ನ ಟೇಕನ್ ಫಾರ್ ಗ್ರಾಂಟೆಡ್ ಆಗಿ ತಗೋಬೇಡಿ 
 
ಹೌದು ಇವತ್ತಿನ ಹುಡುಗ-ಹುಡುಗಿರು ಗೆಳೆಯರ ಆಯ್ಕೆಯಲ್ಲಿ ತುಂಬಾ ಎಚ್ಚರ ವಹಿಸಿ ಅನ್ನೋ ಮಾತುಗಳನ್ನ ಹೇಳಿದ್ದಾರೆ ರಶ್ಮಿಕಾ. ನಿನ್ನೆ ನಿಮ್ಮ ಗೆಳೆಯರಾಗಿದ್ದವರು ನಾಳೆ ಗೆಳೆಯರಾಗಿ ಇರ್ತಾರೋ ಇಲ್ಲವೋ ಗೊತ್ತಿಲ್ಲ. ಅವರು ಕೆಟ್ಟವರು ಅಂತ ಅಲ್ಲ, ಆದ್ರೆ ನಿಮ್ಮ ಪಾಲಿಗೆ ಅವರು ಕೆಟ್ಟವರಾಗಬಹುದು. ಸೋ ನಿಮ್ಮ ಆಯ್ಕೆ ನೆಟ್ಟಗಿರಲಿ ಅಂದಿದ್ದಾರೆ ರಶ್.
 
ಇನ್ನೂ ವಿಜಯ್ ದೇವರಕೊಂಡ ಜೊತೆಗಿನ ಅಫೇರು. ಇಬ್ಬರ ಓಡಾಟ ಸದ್ದು ಮಾಡ್ತಾನೇ ಇರುತ್ವೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗ್ತಾರೆ ಅನ್ನೋ ಸುದ್ದಿ ಕೂಡ ಇದೆ. ಇದೆಲ್ಲರ ನಡುವೆ ರಶ್ಮಿಕಾ ಹಾಕಿರೋ ಈ ಪೋಸ್ಟು ಸಹಜವಾಗೇ ಕುತೂಹಲ ಮೂಡುವಂತೆ ಮಾಡಿದೆ.

ರಶ್ಮಿಕಾ ಗೆಳೆಯರ ಆಯ್ಕೆ ಬಗ್ಗೆ ಯಾಕ್ ಮಾತನಾಡಿದ್ರು. ಯಾವ ಗೆಳಯ-ಗೆಳತಿ ರಶ್ಮಿಕಾ ಮನಸ್ಸಿಗೆ ಘಾಸಿ ಮಾಡಿದ್ರು ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ರಶ್ಮಿಕಾ ಖಾಸಗಿ ಜೀವನದಲ್ಲಿ ಮತ್ತೇನಾದ್ರೂ ಬೆಳವಣಿಗೆ ಆಯ್ತಾ ಅಂತ ಯೋಚನೆ ಮಾಡ್ತಾ  ಇದ್ದಾರೆ. ಅದ್ರೆ ನಿಜಕ್ಕೂ ಏನ್ ಕಿರಿಕ್ ಆಗಿದೆ  ಅನ್ನೋದನ್ನ ಖುದ್ದು ಕಿರಿಕ್ ಬ್ಯೂಟಿನೇ ಹೇಳಬೇಕು.

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more