ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾರಾವ್ ಸಿಕ್ಕಿಬಿದ್ದಿದ್ದೇ ರೋಚಕ; ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.!

ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ನಟಿ ರನ್ಯಾರಾವ್ ಸಿಕ್ಕಿಬಿದ್ದಿದ್ದೇ ರೋಚಕ; ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.!

Published : Mar 06, 2025, 03:49 PM ISTUpdated : Mar 06, 2025, 03:52 PM IST

ಕನ್ನಡದ ನಟಿಯೊಬ್ಬರು ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮತ್ತೊಂದೆಡೆ, ಮೈಸೂರಿನಲ್ಲಿ ವೃದ್ಧ ದಂಪತಿಗಳು ಕೊಲೆಯಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ಅವಳು ಕನ್ನಡ ಚಿತ್ರರಂಗದ ಸುಂದರ ನಟಿ. ಸ್ಟಾರ್​​ ನಟರ ಜೊತೆಗೆ ಹೆಜ್ಜೆ ಹಾಕಿದವಳು. ಇನ್ನು ಅವರ ಅಪ್ಪ ಐಪಿಎಸ್​​ ಅಧಿಕಾರಿ. ಕರ್ನಾಟಕದ ಪೊಲೀಸ್​ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಆದರೆ, ಇವತ್ತು ಇದೇ ನಟಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾಳೆ.. ಅದೂ ಕೂಡ ಸ್ಮಗ್ಲಿಂಗ್​​ ಕೇಸ್‌ನಲ್ಲಿ.. ಪ್ರವಾಸಕ್ಕೆಂದು ದುಬೈಗೆ ಹೋದ ನಟಿ ವಾಪಸ್​​ ಬರ್ತಾ ಕೆ.ಜಿ ಗಟ್ಟಲೆ ವಿಥೌಟ್​​ ಏನೀ ರೆಸಿಪ್ಟ್​​​ ಚಿನ್ನವನ್ನ ತಂದಿದ್ದಾಳೆ. ಆದರೆ ಬೆಂಗಳೂರಿನಲ್ಲಿ ಇಳಿಯುತ್ತಿದ್ದಂತೆ ಲಾಕ್​ ಆಗಿದ್ದಾಳೆ. ಅಷ್ಟಕ್ಕೂ ಸ್ಮಗ್ಲಿಂಗ್​​​ ಕೇಸ್‌​​ನಲ್ಲಿ ತಗ್ಲಾಕಿಕೊಂಡ ಆ ನಟಿಯ ವಿವರ ಇಲ್ಲಿದೆ ನೋಡಿ. 

ಒಬ್ಬ ಐಪಿಎಸ್​​ ಅಧಿಕಾರಿಯ ಮಗಳು ಇಂಥಹ ಕೇಸ್​​ನಲ್ಲಿ ತಗ್ಲಾಕಿಕೊಳ್ತಾಳೆ ಅಂದ್ರೆ ಏನ್​ ಹೆಳೋದು.. ಸದ್ಯ ಅಧಿಕಅರಿಗಳು ಈಕೆಯನ್ನ ವಷಕ್ಕೆ ಪಡೆದಿದ್ದಾರೆ.. ವಿಚಾರಣೆಯಲ್ಲಿ ಏನೇನು ಹೇಳ್ತಾಳೆ ಕಾದು ನೋಡೋಣ. 

ಮತ್ತೊಂದೆಡೆ, ವೃದ್ಧ ದಂಪತಿ ಸಂಧ್ಯಾಕಾಲದಲ್ಲಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ತೋಟದ ಮನೆಯಲ್ಲಿ ಆರಾಮಾಗಿ ಜೀವನ ಸಾಗಿಸುತ್ತಿದ್ದರು. ತಾವಾಯ್ತು, ತಮ್ಮ ಕೆಲಸವಾಯ್ತು ಅಂತಾ ಇದ್ದೋರು. ಆದರೆ ಆವತ್ತು ತಮ್ಮದೇ ಮನೆಯಲ್ಲಿ ಇಬ್ಬರೂ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾರೆ. ಕೊಟ್ಟಿಗೆ ಮನೆಯಲ್ಲಿ ಹಂತಕ ಅವರನ್ನ ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್​ ಆಗಿದ್ದನು. ಇನ್ನು ಇದೇ ಕೇಸ್‌ನ​ ತನಿಖೆಗೆ ಇಳಿದಿರುವ ಪೊಲೀಸರಿಗೆ ಒಂದೇ ಒಂದು ಕ್ಲೂ ಸಿಕ್ಕಿಲ್ಲ. ಆದರೆ ಈ ಡಬಲ್​ ಮರ್ಡರ್​​ ಕೇಸ್​​ ಇಡೀ ಮೈಸೂರನ್ನ ಬೆಚ್ಚಿ ಬೀಳಿಸಿದೆ. ಮಗ ತೋಟದಲ್ಲಿದ್ದರೆ ಮನೆಯಲ್ಲಿ ಹೆತ್ತವರು ಹೆಣವಾಗಿದ್ದಾರೆ. ಇವತ್ತಲ್ಲ ನಾಳೆ ಆ ಹಂತಕ ತಗ್ಲಾಕಿಕೊಳ್ಳುತ್ತಾನೆ. ಆದರೆ ಇಬ್ಬರ ಹೆಣವನ್ನ ಉರುಳಿಸುವ ಉದ್ದೇಶ ಏನಿತ್ತು ಅನ್ನೋದು ಮಾತ್ರ ಎಲ್ಲರಿಗೂ ಗೊತ್ತಾಗಲೇಬೇಕು.

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!