Dec 22, 2023, 11:10 AM IST
ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ವಾರಗಳಿಂದ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿದ್ವು. ಆದ್ರೆ ಆ ಸಿನಿಮಾಗಳಲ್ಲಿ ಸಕ್ಸಸ್ ಆಗಿದ್ದು ಮಾತ್ರ ಧನ್ವೀರ್(Dhanveer) ಹಾಗೂ ನಿರ್ದೇಶಕ ಜಯತೀರ್ಥ(Jayateertha) ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಕೈವ ಸಿನಿಮಾ(Kaiva Movie). ಕಳೆದ ವಾರ ಬಿಡುಗಡೆ ಆಗಿದ್ದ ಕೈವ ಕಥೆಗೆ ಸಿನಿ ಪ್ರೇಕ್ಷಕ ಬೆಸ್ಟ್ ರಿವ್ಯೂ ಕೊಟ್ಟಿದ್ದಾರೆ. ಇದರ ಫಲ ಕೈವ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಹೀಗಾಗಿ ಕೈವ ಚಿತ್ರತಂಡ ಬೆಂಗಳೂರಿನಕಲಾವಿಧರ ಸಂಘದಲ್ಲಿ ಸುದ್ದಿಗೋಷ್ಟಿ ಮಾಡಿ ಕೈವಸ ಸಕ್ಸಸ್ ಸೆಲೆಬ್ರೇಷನ್ ಮಾಡಿದ್ದಾರೆ. ಬೆಂಗಳೂರು(Bengaluru) ಕರಗದ(Karaga) ಹಿನ್ನೆಲೆ ಕಥೆಯ ಕೈವ ಸಿನಿಮಾದಲ್ಲಿ ನಟ ಧನ್ವೀರ್ ಗೆ ಜೋಡಿಯಾಗಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾವನ್ನ ರವೀಂದ್ರ ಕುಮಾರ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ ಕ್ರಿಕೆಟ್ ಹಬ್ಬ..! KCC ಸೀಸನ್ 4 ರ ತಯಾರಿಯಲ್ಲಿ ಕನ್ನಡ ಸ್ಟಾರ್ಸ್..!