ದರ್ಶನ್ ಬೇಲ್​ ಅರ್ಜಿ ಹಾಕುತ್ತಿದ್ದಂತೆ ಡೆವಿಲ್ ಶೂಟಿಂಗ್​ಗೆ ಸಜ್ಜಾದ್ರಾ ಡೈರೆಕ್ಟರ್​ ಮಿಲನಾ ಪ್ರಕಾಶ್?

ದರ್ಶನ್ ಬೇಲ್​ ಅರ್ಜಿ ಹಾಕುತ್ತಿದ್ದಂತೆ ಡೆವಿಲ್ ಶೂಟಿಂಗ್​ಗೆ ಸಜ್ಜಾದ್ರಾ ಡೈರೆಕ್ಟರ್​ ಮಿಲನಾ ಪ್ರಕಾಶ್?

Published : Sep 29, 2024, 04:41 PM IST

ಅಸಲಿಗೆ ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರು ಸಲ್ಲಿಕೆ ಮಾಡಿದ ಅರ್ಜಿಗೆ ಪ್ರಾಸಿಕ್ಯೂಶನ್ ಆಕ್ಷೇಪಣೆ ಸಲ್ಲಿಕೆ ಮಾಡಿದ್ದು, ಈ ಕುರಿತು ಪ್ರತಿವಾದ ಮಾಡಲಿಕ್ಕೆ ಅವಕಾಶ ಕೇಳಿದ್ದಾರೆ. ಆದ್ರೆ ದರ್ಶನ್ ಮಾತ್ರ ನನಗೆ ಇನ್ನೇನು ಬೇಲ್ ಸಿಕ್ಕೇ ಬಿಡುತ್ತೆ ಅಂತ ಬಳ್ಳಾರಿ ಜೈಲಿನಲ್ಲಿ ಖುಷಿ ಖುಷಿಯಿಂದ ನಗುಮುಖದಲ್ಲಿ ಓಡಾಡಿಕೊಂಡಿದ್ರು ದರ್ಶನ್. 

ನಟ ದರ್ಶನ್​​ಗೆ ಈಗ ದೊಡ್ಡ ಚಾಲೆಂಜ್ ಅಂದ್ರೆ ಕೊಲೆ ಕೇಸ್​ನಿಂದ ಬೇಲ್ ಪಡೆಯೋದು. ದರ್ಶನ್ ಬೇಲ್​ ವಿಚಾರಣೆ ದಿನ ದಿನಕ್ಕು ಮುಂದೆ ಹೋಗ್ತಿದೆ. ಆ ಕಡೆ ದಾಸನಿ ಜಾಮೀನು ಸಿಗುತ್ತೆ ಅಂತ ಕಾಯುತ್ತಿರೋ ಆಸೆ ಕಣ್ಣುಗಳು ನುರಾರು. ದಚ್ಚು ಬೇಲ್ ಚರ್ಚೆ ನಡೆಯುತ್ತಿರುವಾಗ್ಲೆ ದಾಸನ ಡೆವಿಲ್​​ಗೆ ಮರುಜೀವ ಬಂದಿದೆ ಅನ್ನೋ ಬಿಸಿ ಬಿಸಿ ಚರ್ಚೆ ಗಾಂಧಿನಗರದಲ್ಲಿ ಹಬ್ಬಿದೆ. ಹಾಗಾದ್ರೆ ಡೆವಿಲ್ ಮತ್ತೆ ಟಾಕಾಫ್ ಆಗುತ್ತಾ.? ಡೆವಿಲ್ ಟೀಮ್ ದರ್ಶನ್​ನ ಭೇಟಿ ಮಾಡಿದ್ದು ಅದೇ ಉದ್ದೇಶಕ್ಕಾ..? ಇಲ್ಲಿದೆ ನೋಡಿ ಡೆವಿಲ್ ಇಂಟ್ರೆಸ್ಟಿಂಗ್ ವಿಷ್ಯಾ. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಜಾಮೀನು ಪಡೆಯೋ ಚಾಲೇಂಜ್ ಎದುರಿಸುತ್ತಿದ್ದಾರೆ. ದರ್ಶನ್ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ತನಗೆ ಸದ್ಯದಲ್ಲೇ ಬೇಲ್ ಸಿಕ್ಕುತ್ತೆ ಅನ್ನೋ ನಿರೀಕ್ಷೆಯಲ್ಲಿ ಕಾಯ್ತಾ ಇದ್ದಾರೆ. ಕೋರ್ಟ್ ಅಂಗಳದಲ್ಲಿ ಇವತ್ತು ವಾದ-ವಿವಾದ ನಡೆದಿದ್ದು ದರ್ಶನ್​ಗೆ ನಿರಾಸೆ ಆಗಿದೆ. 

ಬೇಲ್ ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ ಆಗಿದೆ. ಶುಕ್ರವಾರ ಬೇಲ್ ಸಿಕ್ಕಿಬಿಡುತ್ತೆ.. ಹೆಲಿಕಾಪ್ಟರ್ ನಲ್ಲಿ ಬೆಂಗಳೂರಿಗೆ ಹಾರಿಬಿಡ್ತಿನಿ ಅಂತ ಕಾಯ್ತಿದ್ದ ದರ್ಶನ್ ಗೆ ಕೋರ್ಟ್ ನಿಂದ ಬಂದ ಸುದ್ದಿ ಬೇಸರ ತಂದಿದೆ. ಅಸಲಿಗೆ ಕೋರ್ಟ್ ನಲ್ಲಿ ದರ್ಶನ್ ಪರ ವಕೀಲರು ಸಲ್ಲಿಕೆ ಮಾಡಿದ ಅರ್ಜಿಗೆ ಪ್ರಾಸಿಕ್ಯೂಶನ್ ಆಕ್ಷೇಪಣೆ ಸಲ್ಲಿಕೆ ಮಾಡಿದ್ದು, ಈ ಕುರಿತು ಪ್ರತಿವಾದ ಮಾಡಲಿಕ್ಕೆ ಅವಕಾಶ ಕೇಳಿದ್ದಾರೆ. ಆದ್ರೆ ದರ್ಶನ್ ಮಾತ್ರ ನನಗೆ ಇನ್ನೇನು ಬೇಲ್ ಸಿಕ್ಕೇ ಬಿಡುತ್ತೆ ಅಂತ ಬಳ್ಳಾರಿ ಜೈಲಿನಲ್ಲಿ ಖುಷಿ ಖುಷಿಯಿಂದ ನಗುಮುಖದಲ್ಲಿ ಓಡಾಡಿಕೊಂಡಿದ್ರು ದರ್ಶನ್. ತೆರೆ ಮೇಲೆ ಮಿಂಚಬೇಕಿದ್ದ ಹೀರೋ ಜೈಲು ಸೇರಿದ್ರೆ ಅವರ ಅಭಿಮಾನಿಗಳ ಕತೆ ಏನಾಗ್ಬೇಡಾ ಹೇಳಿ. ಈಗ ಅಂತದ್ದೇ ಸ್ಥಿತಿ ದರ್ಶನ್​ ಫ್ಯಾನ್ಸ್​ಗಳದ್ದು, ಡೆವಿಲ್ ಸಿನಿಮಾ ನೋಡೋಕೆ ಕಾಯುತ್ತಿದ್ದ ಫ್ಯಾನ್ಸ್​​ ದರ್ಶನ್​ರನ್ನ ಜೈಲಿನಲ್ಲಿ ನೋಡೋ ಹಾಗಾಯ್ತು. 

ಆದ್ರೆ ದಾಸ ಜಾಮೀನು ಅರ್ಜಿ ಹಾಕುತ್ತಿದ್ದಂತೆ ಫ್ಯಾನ್ಸ್ ಮುಖದಲ್ಲಿ ಮಾತ್ರವಲ್ಲ ದರ್ಶನ್ ಮುಖದಲ್ಲೂ ಮಂದಹಾಸ ಮೂಡಿದೆ. ಇದರ ಬೆನ್ನಲ್ಲೇ ಡೆವಿಲ್ ಚಿತ್ರತಂಡ ಆ್ಯಕ್ಟೀವ್ ಆಗಿದ್ದು, ದರ್ಶನ್​ರನ್ನ ಬಳ್ಳಾರಿ ಜೈಲಿನಲ್ಲಿ ಭೇಟಿ ಮಾಡಿ ಬಂದಿದೆ. ಹೌದು ಗುರುವಾರ ಡೆವಿಲ್ ಸಿನಿಮಾದ ನಿರ್ಮಾಪಕ ಕಂ ನಿರ್ದೇಶಕ ಪ್ರಕಾಶ್ , ಬಳ್ಳಾರಿ ಜೈಲಿಗೆ ಹೋಗಿ ದರ್ಶನ್ ನ ಭೇಟಿ ಮಾಡಿದ್ರು. ಡೆವಿಲ್ ಸಿನಿಮಾ ಮೇಲೆ ಕೋಟ್ಯಂತರ ಹೂಡಿಕೆ ಮಾಡಿ ಟೆನ್ಷನ್ ನಲ್ಲಿರೋ ಪ್ರಕಾಶ್ , ದರ್ಶನ್ ನ ಭೇಟಿ ಮಾಡಿ ಬೇಲ್ ಬಗ್ಗೆ ಚರ್ಚೆ ಮಾಡಿದ್ದಾರೆ. ಕೆಲವೇ ದಿನದಲ್ಲಿ ತನಗೆ ಬೇಲ್ ಸಿಕ್ಕೇ ಸಿಕ್ಕುತ್ತೆ. ಹೊರಗೆ ಬರುತ್ತಲೇ ಚಿತ್ರೀಕರಣ ಮರು ಪ್ರಾರಂಭ ಮಾಡೋಣ, 

ನೀವು ರೆಡಿ ಇರಿ ಅನ್ನೋ ಮಾತನ್ನ ಪ್ರಕಾಶ್ ಗೆ ಹೇಳಿದ್ದಾರಂತೆ ದರ್ಶನ್. ಅಷ್ಟೆ ಅಲ್ಲ ನಾನು ಬರೋ ವರೆಗೂ ಚಿತ್ರೀಕರಣ ನಿಲ್ಲೋದು ಬೇಡ. ಬೇರೆ ಕಲಾವಿಧರ ಚಿತ್ರೀಕರಣವನ್ನ ಮಾಡಿ ಮುಗಿಸಿ ಎಂದಿದ್ದಾರಂತೆ ದಾಸ. ದರ್ಶನ್ ಹೊರ ಬರುತ್ತಲೇ ಡೆವಿಲ್ ಕಂಪ್ಲೀಟ್ ಮಾಡಿ ರಿಲೀಸ್ ಮಾಡಿದ್ರೆ, ಅಭಿಮಾನಿಗಳ ಸಾಗರವೇ ಥಿಯೇಟರ್ ಗೆ ಹರಿದು ಬರುತ್ತೆ. ಸಾರಥಿ ತರಹ ಡೆವಿಲ್ ಸಕ್ಸಸ್ ಕಾಣುತ್ತೆ  ಮತ್ತೆ ತನ್ನನ್ನ ಅಭಿಮಾನಿಗಳು ಹೊತ್ತು ಮೆರೆಸ್ತಾರೆ ಅಂತ ನಂಬಿಕೊಂಡಿದ್ದಾರೆ ದರ್ಶನ್. ಆದ್ರೆ ಈ ನಂಬಿಕೆ ನಿಜವಾಗುತ್ತಾ,,? ಗೊತ್ತಿಲ್ಲ.. ಸದ್ಯಕ್ಕಂತೂ ದರ್ಶನ್ ಬೇಲ್ ಅರ್ಜಿ ಸೋಮವಾರಕ್ಕೆ ಮುಂದೂಡಿಕೆ ಆಗಿದೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!