ಮತ್ತೆ 'ಭೈರತಿ ರಣಗಲ್' ಆಗಿ ಬಂದ ಶಿವಣ್ಣ: ಶಿವರಾತ್ರಿಗೆ ಸಿನಿಮಾ ಅನೌನ್ಸ್

ಮತ್ತೆ 'ಭೈರತಿ ರಣಗಲ್' ಆಗಿ ಬಂದ ಶಿವಣ್ಣ: ಶಿವರಾತ್ರಿಗೆ ಸಿನಿಮಾ ಅನೌನ್ಸ್

Published : Feb 19, 2023, 01:12 PM IST

ವೇದ ಸಿನಿಮಾದ ವಿಜಯ ಯಾತ್ರೆ ಮುಗಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಇದೀಗ ಭೈರತಿ ರಣಗಲ್ ಆಗಿ  ಅವತಾರ ಎತ್ತಿದ್ದಾರೆ. 

'ಮಫ್ತಿ' ಸಿನಿಮಾದಲ್ಲಿ ಶಿವಣ್ಣನ ಭೈರತಿ ರಣಗಲ್ ಪಾತ್ರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದರು. ಮಫ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್'ನಲ್ಲಿ ಹೊಸ ಸಂಚಲನ ಮೂಡಿಸಿದ್ದ ನಿರ್ದೇಶಕ ನರ್ತನ್, ಭೈರತಿ ರಣಗಲ್ ಸಿನಿಮಾ ನಿರ್ದೇಶನ ಮಾಡೋಕೆ ಉತ್ಸುಕರಾಗಿದ್ದಾರೆ. ರಣಗಲ್  ಟೈಟಲ್'ನಲ್ಲಿ ಸೆಟ್ಟೇರಿರೋ ಈ ಸಿನಿಮಾ ಮಫ್ತಿ ಪಾರ್ಟ್ 2 ಅಲ್ಲವೇ ಅಲ್ಲ, ಶ್ರೀ ಮುರಳಿ ಈ ಸಿನಿಮಾದಲ್ಲಿ ಇರೋದಿಲ್ಲ. ಆದ್ರೆ ಭೈರತಿ ರಣಗಲ್ ಕ್ಯಾರೆಕ್ಟರ್ ಮಾತ್ರ ಇಲ್ಲಿ ಕ್ಯಾರಿ ಆಗುತ್ತಂತೆ.  ಆದ್ದರಿಂದ ಭೈರತಿ ರಣಗಲ್ ಹೊಸ ಕತೆ ಹೊಸರೀತಿಯ ಸಿನಿಮಾವನ್ನೇ ನೀವು ನಿರೀಕ್ಷಿಸಬಹುದು ಎನ್ನಲಾಗಿದೆ. ಭೈರತಿ ರಣಗಲ್ ಸಿನಿಮಾದಲ್ಲಿ ಶಿವಣ್ಣ ಅದೇ ಮಫ್ತಿ ಲುಕ್ ಮುಂದುವರಿಯಲಿದೆ. ಶಿವರಾತ್ರಿಯಂದೇ ಸಿನಿಮಾ ಅನೌನ್ಸ್ ಮಾಡಿದ್ದು ಇಡೀ ಚಿತ್ರತಂಡಕ್ಕೆ ಶುಭಕೋರುತ್ತಿದ್ದಾರೆ ದೊಡ್ಮನೆ ಅಭಿಮಾನಿ ಬಳಗ.

 

04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
02:45ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?
24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?