ವಸಿಷ್ಠ ಸಿಂಹ ನಾಯಕನಾಗಿ ನಟಿಸುವ 'ಲವ್ ಲಿ' ಸಿನಿಮಾದ ಶೂಟಿಂಗ್ ಸೆಟ್'ಗೆ ಹರಿಪ್ರಿಯಾ ಭೇಟಿ ಕೊಟ್ಟಿದ್ದಾರೆ. ಹಾಗೂ ಶ್ರೀಲೀಲಾ ಹಾಗೂ ರವಿತೇಜ ನಟನೆಯ ಧಮಾಕ ಮತ್ತೊಂದು ಲಿರಿಕಲ್ ಹಾಡು ಬಿಡುಗಡೆ ಆಗಿದೆ.
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಹಸೆಮಣೆ ಏರೋಕೆ ದಿನಾಂಕ ನಿಗದಿ ಮಾಡುತ್ತಿದ್ದಾರೆ. ಆದ್ರೆ ಅದಕ್ಕೂ ಮೊದಲು ಹರಿಪ್ರಿಯಾ, ವಸಿಷ್ಠ ಸಿಂಹ ನಾಯಕನಾಗಿ ನಟಿಸುವ 'ಲವ್ ಲಿ' ಸಿನಿಮಾದ ಶೂಟಿಂಗ್ ಸೆಟ್'ಗೆ ಭೇಟಿ ಕೊಟ್ಟಿದ್ದಾರೆ. ವಸಿಷ್ಠ ಸಿಂಹ ಅಭಿನಯದ 'love ಲಿ' ಸಿನಿಮಾ ಚಿತ್ರೀಕರಣ ಉಡುಪಿಯಲ್ಲಿ ನಡೆಯುತ್ತಿದೆ. ಚೇತನ್ ಕೇಶವ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಕಿಸ್, ಭರಾಟೆ ಚಿತ್ರಗಳ ನಂತರ ನಟಿ ಶ್ರೀಲೀಲಾ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕನ್ನಡದ ಜೊತೆ ಜೊತೆಗೆ ಟಾಲಿವುಡ್‌ನಲ್ಲಿ ಶ್ರೀಲೀಲಾ ಬ್ಯುಸಿಯಾಗುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಬ್ಯುಸಿ ಆಗಿರೋ ಶ್ರೀಲೀಲಾ, ಮಾಸ್ ಮಹರಾಜ ರವಿತೇಜ ಜೊತೆ ಧಮಾಕ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ಬಿಡುಗಡೆ ಆಗಿದೆ.