ಸಂಗೀತ ಲೋಕಕ್ಕೆ 'ಚೂಟಿ ಪೋರಿ' ಎಂಟ್ರಿ: 'ಉತ್ತರ ಕರ್ನಾಟಕ'ದ ಆಲ್ಬಂ ಹಾಡು ರಿಲೀಸ್

Jan 23, 2023, 5:38 PM IST

ಕರಿಬಸವ ತಡಕಲ್ ಅವರು ಚೂಟಿ ಪೋರಿ ಎಂಬ ಹಾಡಿಗೆ ಲಿರಿಕ್ಸ್ ಬರೆದು, ಸಂಗೀತ ಮಾಡಿ ಹಾಗೂ ಹಾಡುವುದರ ಜೊತೆಗೆ ಲೀಡ್ ರೋಲ್'ನಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಪೂಜಾ ವಿಭೂತಿಮಠ ನಟಿಸಿದ್ದು, ಇನ್ನುಳಿದಂತೆ ದೇವರಾಜ್, ಶಿವು ಹೊಂಬೆಳಕು ಕೂಡ ನಟಿಸಿದ್ದಾರೆ. ಈ ಹಾಡಿಗೆ ವಸಂತ್ ಆಚಾರಿ ಹಾಗೂ ಅರ್ಜುನ್ ಗೌಡ ಕ್ಯಾಮೆರಾ ಕೆಲಸ ಮಾಡಿದ್ದು, ಚರಣ್ ರಾಜ್ ಮುರ್ನಾಡ್ ಕೊರಿಯೋಗ್ರಫಿ ಹಾಗೂ ಡೈರೆಕ್ಷನ್'ನಲ್ಲಿ 'ಚೂಟಿ ಪೂರಿ' ಹಾಡು ಮೂಡಿ ಬಂದಿದೆ.