ಅಮೆರಿಕಾಗೆ ಹೊರಟುನಿಂತ ಕ್ಷಣದಲ್ಲಿ ಶಿವಣ್ಣ ಫ್ಯಾನ್ಸ್‌ಗೆ ಕೊಟ್ಟಿದ್ದೇನು?

ಅಮೆರಿಕಾಗೆ ಹೊರಟುನಿಂತ ಕ್ಷಣದಲ್ಲಿ ಶಿವಣ್ಣ ಫ್ಯಾನ್ಸ್‌ಗೆ ಕೊಟ್ಟಿದ್ದೇನು?

Published : Dec 01, 2024, 01:29 PM IST

ಎನರ್ಜಿ ಕಿಂಗ್ ಶಿವರಾಜ್​ ಕುಮಾರ್ ವಯಸ್ಸು 60 ಆದ್ರು ಹತ್​ ಹದಿನೈದು ಸಿನಿಮಾಗಳ ಲೈನಪ್​ ಇದೆ. ಎಲ್ಲವೂ ಸರಿ ಇದ್ದಿದ್ರೆ ಶಿವಣ್ಣ ಶೂಟಿಂಗ್ ಅಂತ ಫುಲ್ ಬ್ಯುಸಿ ಆಗ್ತಿದ್ರು. ಆದ್ರೆ ಒಂದ್​ ದೊಡ್ಡ ಗಂಡಾಂತರ  ಹ್ಯಾಟ್ರಿಕ್ ಹೀರೋಗೆ ಎದುರಾಗಿದೆ. ಅದು ಆರೋಗ್ಯದ ಬೇನೆ. ..

ಸೆಂಚ್ಯೂರಿ ಸ್ಟಾರ್ ಶಿವರಾಜ್​ ಕುಮಾರ್​ ಭೈರತಿ ರಣಗಲ್ ದರ್ಬಾರ್​ ನೋಡಿದ್ದಾಯ್ತು. ಶಿವಣ್ಣ ಹದಗೆಟ್ಟ ಹೆಲ್ತ್​​ ರಿಪೇರಿಗೆ ಫಾರಿನ್ ಹೊರಟು ನಿಂತಿದ್ದಾರೆ. ಈ ಟೈಮ್​ನಲ್ಲಿ ತನ್ನ ಫ್ಯಾನ್ಸ್​​ಅನ್ನ ಮತ್ತೊಮ್ಮೆ ಖುಷಿ ಪಡಿಸಿ ಹೋಗೋ ಧೈರ್ಯ ಮಾಡಿದ್ದಾರೆ. ಹಾಗಾದ್ರೆ ಏನದು ಖುಷಿ ವಿಷಯ.. ಜೆಸ್ಟ್ ಹ್ಯಾವ್ ಅ ಲುಕ್.. 

ಎನರ್ಜಿ ಕಿಂಗ್ ಶಿವರಾಜ್​ ಕುಮಾರ್ ವಯಸ್ಸು 60 ಆದ್ರು ಹತ್​ ಹದಿನೈದು ಸಿನಿಮಾಗಳ ಲೈನಪ್​ ಇದೆ. ಎಲ್ಲವೂ ಸರಿ ಇದ್ದಿದ್ರೆ ಶಿವಣ್ಣ ಶೂಟಿಂಗ್ ಅಂತ ಫುಲ್ ಬ್ಯುಸಿ ಆಗ್ತಿದ್ರು. ಆದ್ರೆ ಒಂದ್​ ದೊಡ್ಡ ಗಂಡಾಂತರ  ಹ್ಯಾಟ್ರಿಕ್ ಹೀರೋಗೆ ಎದುರಾಗಿದೆ. ಅದು ಆರೋಗ್ಯದ ಬೇನೆ. ಶಿವರಾಜ್ ಕುಮಾರ್ ಆರೋಗ್ಯ ಸ್ವಲ್ಪ ಹದಗೆಟ್ಟಿದೆ. ಟ್ರೀಟ್ಮೆಂಟ್​ಗೆ ಅಂತ ಸೆಂಚುರಿ ಸ್ಟಾರ್​ ಶಿವಣ್ಣ ಫಾರಿನ್​ಗೆ ಹೊರಟು ನಿಂತಿದ್ದಾರೆ.. 

ಶಿವಣ್ಣ ಡಿಸೆಂಬರ್​ 20ರಂದು ಅನಾರೋಗ್ಯದ ಟ್ರೀಟ್ಮೆಂಟ್​​ಗೆ ವಿದೇಶಕ್ಕೆ ಹೊರಟು ನಿಂತಿದ್ದಾರೆ. ಭೈರತಿ ರಣಗಲ್ ಸಿನಿಮಾ ಗೆದ್ದ ಖುಷಿಯಲ್ಲಿ ರಾಜ್ಯ ಸುತ್ತುತ್ತಿರೋ ಶಿವಣ್ಣ ಫ್ಯಾನ್ಸ್​ ಜತೆ ಸಮಯ ಕಳೆಯುತ್ತಿದ್ದಾರೆ. ಆದ್ರೆ ವಿದೇಶಕ್ಕೆ ಹೊರಡೋ ಮುನ್ನ ಶಿವಣ್ಣ, ತನ್ನ ಅಭಿಮಾನಿ ಬಳಗಕ್ಕೆ ಬಿಗ್​ ಸರ್​ಪ್ರೈಸ್​ ಒಂದನ್ನ ಕೊಡುತ್ತಿದ್ದಾರೆ. ಅದೇ ತಲೈವಾ ರಜನಿಕಾಂತ್-ಶಿವರಾಜ್ ಕುಮಾರ್ ಕಾಂಬಿನೇಷನ್​ನ ಸೂಪರ್ ಡೂಪರ್ ಸರ್​​ಪ್ರೈಸ್.. 

ಜೈಲರ್​.. ಈ ಸಿನಿಮಾ ನೋಡಿದವರು ಹೇಳಿದ್ದು ಒಂದೇ ಮಾತು. ವಾವ್ಹ್​ ಶಿವಣ್ಣ ರಜನಿಕಾಂತ್​ರದ್ದು ಎಂತಹಾ ಕಾಂಬಿನೇಷನ್​ ಅಂತ. ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ನರಸಿಂಹ ಪಾತ್ರದಲ್ಲಿ ಶಿವಣ್ಣ ಅಬ್ಬರಿಸಿದ್ದರು. ಜೆಸ್ಟ್​ 11 ನಿಮಿಷ ಬಂದು ಹೋಗೋ ನರಸಿಂಹನ ಆ ರೋಲ್​ ಜೈಲರ್​​ನ ಖದರ್​ಗೆ ಮುಕುಟಮಣಿಯಾಗಿತ್ತು. ಜೈಲರ್​ನಲ್ಲಿ ರಜನಿಕಾಂತ್ ಎಷ್ಟು ಅಬ್ಬರಿಸಿದ್ರೋ, ಅದಕ್ಕೂ ಒಂದು ಕೈ ಹೆಚ್ಚೇ ಅನ್ನುವಂತೆ ಶಿವರಾಜ್​ ಕುಮಾರ್​ ಬೆಳಗಿದ್ರು. ಈಗ ಇದೇ ಜೈಲರ್ ಜೋಡಿ ಮತ್ತೆ ಒಂದಾಗಿ. ಡಿಸೆಂಬರ್ 12ಕ್ಕೆ ಈ ಜೈಲರ್ ಜೋಡಿಯ ಹೊಸ ಸಿನಿಮಾದ ಪ್ರೋಮ್ ರಿಲೀಸ್ ಆಗುತ್ತಿದೆ. 

ಇದೀಗ 'ಜೈಲರ್' ಸೀಕ್ವೆಲ್ಗೆ ವೇದಿಕೆ ಸಿದ್ಧವಾಗಿದೆ. ಮತ್ತೆ ಅದೇ ತಂಡ ಒಟ್ಟಿಗೆ ಕೆಲಸ ಮಾಡಲಿದೆ. ನೆಲ್ಸನ್ ನಿರ್ದೇಶನದಲ್ಲೇ ಸಿನಿಮಾ ಮೂಡಿ ಬರಲಿದೆ. ಇದೀಗ 'ಜೈಲರ್' ಸೀಕ್ವೆಲ್ ಪ್ರೋಮೊ ಶೂಟ್ ಆಗುತ್ತಿದೆ. ಈ ಶೂಟಿಂಗ್​ನಲ್ಲಿ ಶಿವಣ್ಣ ಕೂಡ ಇದ್ದಾರಂತೆ. ಅಲ್ಲಿಗೆ ಮತ್ತೆ ಶಿವಣ್ಣ ರಜನಿ ಕಾಂಬೋ ಕಮಾಲ್ ಮಾಡೋದು ಸತ್ಯ ಸತ್ಯ ಸತ್ಯ.. ಡೀಟೇಲ್ಸ್‌ಗೆ ವಿಡಿಯೋ ನೋಡಿ..
 

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more