ಪುಂಡರ ಸಹವಾಸ ಕಟ್​, ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ  ದಾಸನ ದಿನಚರಿ ಹೇಗಿದೆ?

ಪುಂಡರ ಸಹವಾಸ ಕಟ್​, ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ ದಾಸನ ದಿನಚರಿ ಹೇಗಿದೆ?

Published : May 16, 2025, 12:19 PM IST

ನಟ ದರ್ಶನ್​ ಖದರ್​ ಕರಗಿ ಬದಲಾಗಿದ್ದಾರೆ. ದರ್ಶನ್ ಈಗ ಶೂಟಿಂಗ್ ಮತ್ತು ಮನೆ, ಹೆಂಡ್ತಿ, ಮಗನ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ದರ್ಶನ್​ ಅವರನ್ನು ಸುತ್ತುವರೆದಿದ್ದ ಕೆಟ್ಟ ಪರಿವಾರವನ್ನು ದೂರವಿಟ್ಟು, ಪತ್ನಿ ವಿಜಯಲಕ್ಷ್ಮೀ ಅವರ ಇಮೇಜ್​ ಸುಧಾರಿಸಲು ಶ್ರಮಿಸುತ್ತಿದ್ದಾರೆ.

ನಟ ದರ್ಶನ್​ ಖದರ್​ ಕರಗಿ ತಿಂಗಳುಗಳೇ ಕಳೆದಿವೆ. ಒಂದೇ ಒಂದು ದೊಡ್ಡ ದುರಂತ ದಾಸನ ಗತ್ತು ದೌಲತ್ತನ್ನೆಲ್ಲಾ ರಕ್ತದಲ್ಲಿ ಕೊಚ್ಚಿ ಹೋಗೋ ಹಾಗೆ ಮಾಡಿದೆ. ದರ್ಶನ್ ಈಗೇನಿದ್ರು ಅಮ್ಮಾವ್ರ ಗಂಡ. ದಾಸನಿಗೆ ಹೆಂಡತಿಯೇ ಬೆಂಗಾವಲು. ಕುಂತ್ರು ನಿಂತ್ರೂ ದರ್ಶನ್​​ ತನ್ನ ಮುದ್ದು ರಾಕ್ಷಸಿಯ ಮಾತು ಬಿಟ್ರೆ ಬೇರಾರ ಮಾತನ್ನೂ ಕೇಳಿಸಿಕೊಳ್ಳೋಲ್ಲ. ಹಾಗಾದ್ರೆ ಅಮ್ಮಾವ್ರ ಪತಿ ದಾಸನ ದಿನಚರಿ ಹೇಗಿದೆ? ದಚ್ಚು ಕರಿಯರ್  ಬಿಲ್ಡ್ ಮಾಡಲು ವಿಜಯಲಕ್ಷ್ಮೀ ಏನೆಲ್ಲಾ ಮಾಡುತ್ತಾರೆ ಅಂತ ನೋಡೋಣ  

ನಟ ದರ್ಶನ್​​ ಸಂಪೂರ್ಣ ಬದಲಾಗಿದ್ದಾರೆ. ದರ್ಶನ್ ಕೆಲಸ ಏನಿದ್ರು ಶೂಟಿಂಗ್ ಮತ್ತು ಮನೆ ಹೆಂಡ್ತಿ ಮಗ ಇಷ್ಟೇ ಪ್ರಪಂಚ. ದರ್ಶನ್​ ಹಿಂದೆ ಇದ್ದ ಪುಂಡ ಪೋಕ್ರಿಗಳ  ದೊಡ್ಡ ಬಾಲ ಕಟ್​ ಆಗಿದೆ. ದರ್ಶನ್ ಈಗ ಹೆಂಡ್ತಿ ಮಗನ ಜೊತೆಯಷ್ಟೇ ಓಡಾಡ್ತಾರೆ.  ದೊಡ್ಡ ಸ್ಟಾರ್​ ಡಮ್​ ಇದ್ರೂ ನಟ ದರ್ಶನ್​ ಹಾಳಾಗಿದ್ದು ಅವರ ಸುತ್ತ ಇದ್ದ ಕೆಟ್ಟ ಪಟಾಲಂನಿಂದ ಅಂತ ಇಡೀ ಚಿತ್ರರಂಗ ಒಕ್ಕೊರಲಿನಿಂದ ಹೇಳಿತ್ತು. ಅದು ನಿಜವೂ ಆಯ್ತು. ದರ್ಶನ್ ಸುತ್ತ ಇದ್ದವರೆಲ್ಲಾ ಕಿರಾತಕರೆ. ಆದ್ರೆ ಈಗ ಆ ಕಿರಾತಕ ಗ್ಯಾಂಗ್​ ಅನ್ನ ದಚ್ಚು ದೂರ ಇಟ್ಟಿದ್ದಾರೆ. ಡ್ಯಾಮೇಜ್ ಆಗಿರೋ ದಾಸನ ಇಮೇಜ್​ ಅನ್ನ ಮತ್ತೆ ಕಟ್ಟಿಕೊಡೋಕೆ ಪತ್ನಿ ವಿಜಯಲಕ್ಷ್ಮೀ ಪಣ ತೊಟ್ಟಿದ್ದಾರೆ. 

ನಟ ದರ್ಶನ್​​​ ಸಂಪೂರ್ಣ ಜವಾಬ್ಧಾರಿ ವಿಜಯಲಕ್ಷ್ಮೀಯದ್ದು. ದಚ್ಚು ಬೆಳಗ್ಗೆ ಎದ್ದು ರಾತ್ರಿ ಮಲಗೋ ವರೆಗೂ ಏನ್ ಮಾಡಬೇಕು. ಏನು ಮಾಡಬಾರದು ಅಂತ ನಿರ್ಧರಿಸೋದು ವಿಜಯಲಕ್ಷ್ಮೀ. ಹೀಗಾಗಿ ದಾಸ ಶೂಟಿಂಗ್ ಬಿಟ್ರೆ ಸೀದಾ ಮನೆ ಸೇರಿಕೊಳ್ತಾರೆ. ದಚ್ಚುಗೆ ಬೇಕಾದ ಊಟ ಜಿಮ್​​​ ಬಟ್ಟೆ ಹೀಗೆ ಪ್ರತಿಯೊಂದನ್ನ ನೋಡಿಕೊಳ್ಳೋದು ಪತ್ನಿಯೇ ಅಂತೆ. ದರ್ಶನ್ ಕೂಡ ನನಗೆ ಯಾರ್ ಸಹವಾಸವೂ ಬೇಡ ಅಂತ ಹೆಂಡತಿ ಜೊತೆಯೇ ಎಲ್ಲಾ ಕಡೆ ಓಡಾಡುತ್ತಿದ್ದಾರೆ.
 
 

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
Read more