ಫೋನ್‌ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ತಂದೆ

ಫೋನ್‌ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ತಂದೆ

Published : Jul 31, 2025, 04:27 PM IST
ಗುಬ್ಬಿ ತಾಲ್ಲೂಕಿನಲ್ಲಿ ಫೋನ್‌ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ತಂದೆಯೊಬ್ಬರ ಹೃದಯವಿದ್ರಾವಕ ಘಟನೆ ನಡೆದಿದೆ. ವಿವಾಹಿತ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುಮಕೂರು (ಜು.31): ಫೊನ್ ಪೇ, ಗೂಗಲ್ ಪೇ ಮೂಲಕ ಹೆಣ್ಣು ಮಕ್ಕಳಿಗೆ ಹಣ ಹಾಕಿಸೋ ಮುನ್ನಾ ಎಚ್ಚರ. ಮಗಳ ಮೊಬೈಲ್ ನಂಬರ್ ಕೊಟ್ಟು ಹಣ ಹಾಕಿಸಿದ ತಪ್ಪಿಗೆ ಮಗಳನ್ನೆ ಕಳೆದುಕೊಂಡ‌ ತಂದೆ‌ ಕಣ್ಣೀರು ಹಾಕಿದ್ದಾರೆ. 

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಗ್ಯಾರಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ. ವಿವಾಹಿತನ ಕಿರುಕುಳಕ್ಕೆ ಬೇಸತ್ತು ಯುವತಿ ಭಾವನಾ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.  ತಮ್ಮದೇ ಗ್ರಾಮದ ವಿವಾಹಿತ ವ್ಯಕ್ತಿಗೆ ತನ್ನ ಮಗಳ ಮೊಬೈಲ್ ನಂಬರ್ ಕೊಟ್ಟು ಫೋನ್ ಪೇ ಮಾಡುವಂತೆ ಹಣ ಕೊಟ್ಟಿದ್ದಾರೆ. ವಿವಾಹಿತ ವ್ಯಕ್ತಿ ನವೀನ್ ಎಂಬಾತ ತನ್ನನ್ನು ಪ್ರೀತಿ ಮಾಡುವಂತೆ ನೀಡುತ್ತಿದ್ದ ನಿರಂತರ ಕಿರುಕುಳಕ್ಕೆ ಬೇಸತ್ತು ಮಗಳು ಸಾವಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. 

ಗುಬ್ಬಿ ತಾಲೂಕಿನ ಗ್ಯಾರಹಳ್ಳಿ ಗ್ರಾಮದ ಭಾವನಾ, ಮೈಸೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದಳು.  ಮೈಸೂರಿನಲ್ಲಿದ್ದ ಭಾವನಾಳ ಖರ್ಚಿಗೆ ಅವಳ ಅಪ್ಪ ಪೋನ್ ಪೇ ಮೂಲಕ ಹಣ ಕಳಿಸಬೇಕಿತ್ತು. ತಮಗೆ ಫೋನ್‌ ಪೇ ವ್ಯವಹಾರ ಮಾಡಲು ಬಾರದ ಹಿನ್ನೆಲೆಯಲ್ಲಿ ಅದೇ ಗ್ರಾಮದ ನವೀನ್ ಎಂಬಾತನಿಗೆ ಹೇಳಿ ಮಗಳ ಮೊಬೈಲ್ ನಂಬರ್ ಕೊಟ್ಟು ಆಕೆಗೆ, ಹಣ ಕಳಿಸಲು ಹೇಳುತ್ತಿದ್ದರು. ಆದರೆ, ಈತ ಯುವತಿಯ ಮೊಬೈಲ್ ನಂಬರ್ ದುರ್ಬಳಕೆ ಮಾಡಿಕೊಂಡು, ತನ್ನನ್ನು ಪ್ರೀತಿ ಮಾಡುವಂತೆ ಭಾವನಾಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಮದುವೆ ಆಗಿ ಮಕ್ಕಳಿದ್ದ ವ್ಯಕ್ತಿ ಪ್ರೀತಿ  ಮಾಡುವಂತೆ ಪೀಡಿಸುತ್ತಿದ್ದರಿಂದ ತಾನೇ ಸಾವಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
25:10ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!
23:06ಹೆಂಡತಿ ಕಾಟಕ್ಕೆ 'ಲೈವ್' ಸೂಸೈಡ್ ಯತ್ನ: ಗಂಡನ ನೌಟಂಕಿ ನಾಟಕ ಬಿಚ್ಚಿಟ್ಟ ಕುವೈತ್ ರಿಟರ್ನ್ ಪತ್ನಿ!
24:05ಅಮ್ಮ ಸತ್ತ ಮಗುವಿಗೆ ಆಸರೆಯಾಗದೇ, 3ನೇ ಮಹಡಿಯಿಂದ ತಳ್ಳಿದ ಮಲತಾಯಿ! ಸಾವಿನ ಸತ್ಯ ಬಿಚ್ಚಿಟ್ಟ ಸಿಸಿಟಿವಿ!
23:37ಸೀನಿಯರ್ ಲಾಯರ್ ಮದುವೆಯಾಗಲು ಹೆಂಡತಿಯನ್ನೇ ಮುಗಿಸಿದ ಗಂಡ; 2 ಬಾರಿ ಜಸ್ಟ್ ಮಿಸ್, 3ನೇ ಸಲ ಮಟಾಶ್!
Read more