ಲಾರಾ ಸಾವಿಗೆ ರಮ್ಯಾ ಖಾರ; ಪ್ರಾಣಿಹಿಂಸೆ ವಿರುದ್ಧ ಕಠಿಣ ಕಾನೂನು ತರಲು ಆಗ್ರಹ

Feb 3, 2022, 1:16 PM IST

ಬೆಂಗಳೂರಿನ ಬೀದಿಯಲ್ಲಿ ಮೂರು ದಿನಗಳ ಹಿಂದೆ ಕಾರಿನ ಅಡಿಗೆ ಸಿಲುಕಿ ಸಾವಿಗೀಡಾದ ಲಾರಾ ಎಂಬ ಬೀದಿ ನಾಯಿಯ ಸಾವಿಗೆ ಇಡೀ ದೇಶವೇ ಮಿಡಿಯುತ್ತಿದೆ. ಪ್ರತಿನಿತ್ಯ ದೇಶದೆಲ್ಲಡೆ ನೂರಾರು ಪ್ರಾಣಿಗಳು ಅಪಘಾತದಿಂದ ಪ್ರಾಣ ಬಿಡುತ್ತವೆ. ಆದಕ್ಕಿಲ್ಲದ ಜನಾಕ್ರೋಶ ಲಾರಾ ಸಾವಿನಿಂದ ಎದ್ದಿರಲು ಕಾರಣ, ಬೇಕಂತಲೇ ನಾಯಿಯನ್ನು ಸಾಯಿಸಿರುವುದು. 

Beer For Hair: ಬಿಯರ್ ಬಳಸಿದ್ರೆ ಕೂದಲು ಸಾಫ್ಟ್ ಆಗುತ್ತೆ ಅಂತಾರೆ..ನಿಜಾನ ?

ರಸ್ತೆ ಬದಿಯಲ್ಲಿ ತನ್ನ ಪಾಡಿಗೆ ತಾನು ಮಲಗಿದ್ದ ನಾಯಿಯ ಮೇಲೆ ಆಡಿ ಕಾರಿನಲ್ಲಿ ಬಂದ ಶ್ರೀಮಂತನೊಬ್ಬ ಕಾರನ್ನು ಹತ್ತಿಸಿದ್ದಾನೆ. 
ಆದಿ ಎಂಬ ಯುವಕ ಬೇಕಂತಲೇ ಕಾರನ್ನು ಹಿಂದೆ ತೆಗೆದುಕೊಂಡು ಹೋಗಿ ಮತ್ತೆ ನಾಯಿಯ ಮೇಲೆ ಚಕ್ರಗಳನ್ನು ಹತ್ತಿಸಿ ಸಾಯಿಸಿದ ವಿಕೃತಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಾಯಿಯ ಈ ಕೊಲೆಗೆ ಮೋಹಕ ತಾರೆ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ, ಅಂತ್ಯಸಂಸ್ಕಾರಕ್ಕೆ ಹೆಗಲೊಡ್ಡಿದ್ದಾರೆ. ಹಾಗೂ, ಪ್ರಾಣಿ ಹಿಂಸೆ ಮಾಡುವವರ ವಿರುದ್ಧ ಕಠಿಣ ಕಾನೂನು ಜಾರಿ ಮಾಡಲೇಬೇಕೆಂದು ಆಗ್ರಹಿಸಿದ್ದಾರೆ. ರಮ್ಯಾರ ಈ ಆಗ್ರಹಕ್ಕೆ ದೇಶದೆಲ್ಲೆಡೆ ಪ್ರಾಣಿಪ್ರಿಯರಿಂದ ಬೆಂಬಲ ವ್ಯಕ್ತವಾಗುತ್ತಿದೆ.