ಸೀನಿಯರ್ ಲಾಯರ್ ಮದುವೆಯಾಗಲು ಹೆಂಡತಿಯನ್ನೇ ಮುಗಿಸಿದ ಗಂಡ; 2 ಬಾರಿ ಜಸ್ಟ್ ಮಿಸ್, 3ನೇ ಸಲ ಮಟಾಶ್!

ಸೀನಿಯರ್ ಲಾಯರ್ ಮದುವೆಯಾಗಲು ಹೆಂಡತಿಯನ್ನೇ ಮುಗಿಸಿದ ಗಂಡ; 2 ಬಾರಿ ಜಸ್ಟ್ ಮಿಸ್, 3ನೇ ಸಲ ಮಟಾಶ್!

Published : Sep 11, 2025, 03:55 PM IST
ಪ್ರೀತಿಸಿ ಮದುವೆಯಾದ ಗಂಡನೇ ಗರ್ಭಿಣಿ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಸುಪಾರಿ ಕೊಲೆಗಾರರ ಮೂಲಕ ಈ ಕೃತ್ಯ ಎಸಗಿದ ಆತನ ದುಷ್ಕೃತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ. ನ್ಯಾಯವಾದಿಯಾಗಿದ್ದ ಆತ ಈ ಕೃತ್ಯ ಎಸಗಿದ್ದು ಏಕೆ ಎಂಬುದು ತಿಳಿದುಕೊಳ್ಳಲು ಓದಿ.

ಅವರಿಬ್ಬರೂ ಒಂದೇ ಊರಿನವರು. ವರ್ಷಗಳ ಕಾಲ ಪ್ರೀತಿಸಿ ಹೆತ್ತವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರು. ಈಗ ಹೆಂಡತಿ 6 ತಿಂಗಳ ಗರ್ಭಿಣಿ. ಆವತ್ತೊಂದು ದಿನ ಗಂಡ ಸುತ್ತಾಡಿಕೊಂಡು ಬರೋಣ ಬಾ ಅಂತ ಹೆಂಡತಿಯನ್ನ ಕರೆದುಕೊಂಡು ಹೊರಗೆ ಹೋಗಿದ್ದನು. ಆದ್ರೆ ಮಾರ್ಗ ಮಧ್ಯೆ ಆ್ಯಕ್ಸಿಡೆಂಟ್​​ ಆಗಿಬಿಡ್ತು. ಹೆಂಡತಿ ಅಲ್ಲೇ ಪ್ರಾಣಬಿಟ್ಟಳು. ಗಂಡನೇ ಪೊಲೀಸರ ಬಳಿ ಹೋಗಿ ವಿಷಯ ಹೇಳಿ ಕೇಸ್​ ದಾಖಲಿಸಿದ. ಆದರೆ ತನಿಖೆ ನಡೆಸಿದ ಪೊಲೀಸರಿಗೆ ಅದು ಆ್ಯಕ್ಸಿಡೆಂಟ್​​ ಅಲ್ಲ ಬದಲಿಗೆ ಮರ್ಡರ್​ ಅನ್ನೋ ಸಂಶಯ ಬಂದಿತ್ತು. ಕಂಪ್ಲೆಂಟ್​​ ಕೊಡಲು ಬಂದಿದ್ದ ಗಂಡನನ್ನೇ ವಿಚಾರಣೆ ಮಾಡಿದ್ದರು. ಆಗಲೇ ನೋಡಿ ಗರ್ಭೀಣಿಯನ್ನ ಗಂಡನೇ ಕೊಲೆ ಮಾಡಿದ್ದ ಅನ್ನೋ ಸತ್ಯ ಗೊತ್ತಾಗಿದ್ದು. ಅಷ್ಟಕ್ಕೂ ಗಂಡನೇ ಹೆಂಡತಿಯನ್ನ ಕೊಂದಿದ್ದೇಕೆ..? ಒಂದು ಡೆಡ್ಲಿ ಮರ್ಡರ್​ ಹಿಂದಿನ ರೋಚಕ ಇನ್ಬೆಸ್ಟಿಗೇಷನ್​ ಕಥೆಯೇ ಇವತ್ತಿನ ಎಫ್​.ಐ.ಆರ್​​.

ಪ್ರದೀಪ ತನ್ನ ಸೀನಿಯರ್‌ಳನ್ನ ಮದುವೆಯಾಗಲು ಗರ್ಭಿಣಿ ಹೆಂಡತಿಯನ್ನೇ ಮುಗಿಸೋ ನಿರ್ಧಾರ ಮಾಡಿದ್ದನು. ಅದಕ್ಕಾಗಿ ಸ್ನೇಹಿತನಿಗೆ ರೂ. 15 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಇದರಲ್ಲಿ ₹90 ಸಾವಿರ ಅಡ್ವಾನ್ಸ್​​ ಪಡೆದ ಪ್ರದೀಪನ ಗೆಳೆಯ ರಾಜೇಂದ್ರ ಒಂದು ಒಳ್ಳೆ ಸ್ಕೆಚ್​ ಅನ್ನೇ ಹಾಕಿದ್ದ. ನಂತರ ಏನಾಯ್ತು..? ಆವತ್ತು ಚೈತ್ರಾಣಿ ಸಾಯೋ ದಿನ ಏನೇನಾಯ್ತು..? ಈ ಕಿರಾತಕರು ಅವಳನ್ನ ಮುಗಿಸಿದ್ದೇಗೆ..? ಎನ್ನುವುದು ಅತ್ಯಂತ ರೋಚಕವಾಗಿದೆ.

ಪ್ರೀತಿಸಿ ಮದುವೆಯಾದ ಹೆಂಡತಿ ಜೊತೆ ಜಗಳ; ನೇಣಿಗೆ ಶರಣಾದ ಹೋಟೆಲ್ ಉದ್ಯಮಿ

ಅಡ್ವಾನ್ಸ್​​ ಹಣವನ್ನ ಪಡೆದು ರಾಜೆಂದ್ರ 2 ಬಾರಿ ಸ್ಕೆಚ್​ ಹಾಕಿ ಚೈತ್ರಾಣಿಯನ್ನ ಮುಗಿಸೋದಕ್ಕೆ ನೋಡಿದ್ದನು. ಆದರೆ, ​​ ಚೈತ್ರಾಣಿ ಆ ಎರಡೂ ಅಟೆಂಪ್ಟ್‌ಮನಲ್ಲಿ ಜಸ್ಟ್​​ ಮಿಸ್​ ಆಗಿದ್ದಳು. ಆಗ ಗಂಡ ಪ್ರದೀಪನೇ ಫೀಲ್ಡ್‌ಗೆ ಇಳಿದುಬಿಟ್ಟ. ನಾನೇ ಹೆಂಡತಿಯನ್ನ ಕರೆದುಕೊಂಡು ಬರ್ತೀನಿ ಎಲ್ಲಾ ಸೇರಿ ಅವಳನ್ನ ಮುಗಿಸೋಣ ಅಂತ ಡಿಸೈಡ್​​ ಮಾಡಿ ಆವತ್ತೊಂದು ದಿನ ಹೆಂಡತಿಗೆ ಹಾಗೇ ಸುತ್ತಾಕೊಂಡು ಬರೋಣ ಬಾ ಅಂತ ಕರೆದುಕೊಂಡು ಹೋಗ್ತಾನೆ. ಆಕೆ ಕೂಡ ಖುಷಿ ಖುಷಿಯಿಂದ ಕಾರು ಹತ್ತಿದ್ದಾಳೆ. ಅಷ್ಟೇ ಮಾರ್ಗ ಮಧ್ಯೆ ಕಾರಿನೊಳಗೆ ಬಂದ ಸುಪಾರಿ ಕಿಲ್ಲರ್ಸ್​​ ಅವಳ ತಲೆಗೆ ಹೊಡೆದು ಕೊಂದು ಬಿಡ್ತಾರೆ. ನಂತರ ಗಂಡ ಆ್ಯಕ್ಸಿಡೆಂಟ್​​ ಆಗಿದೆ ಅಂತ ಅಳುತ್ತಾ ಪೊಲೀಸ್​ ಠಾಣೆಗೆ ಹೋಗ್ತಾನೆ. ಆದ್ರೆ ಮಾಡಿದ ಪಾಪ ಅವನನ್ನೇ ಅಲ್ಲೇ ಲಾಕ್​ ಆಗುವಂತೆ ಮಾಡುತ್ತದೆ.

ನ್ಯಾಯವಾದಿ ಆಗಿದ್ದುಕೊಂಡು ಸಮಾಜಕ್ಕೆ ಮಾದರಿ ಆಗಬೇಕಿದ್ದ ಪ್ರದೀಪ ಹೆಂಡತಿ ಗರ್ಭಿಣಿ ಅಂತ ಗೊತ್ತಿದ್ರೂ ಅವಳನ್ನ ಕೊಂದು ಮುಗಿಸಿದ್ದಾನೆ.. ಮಾಡಬಾರದ ಕೆಲಸ ಮಾಡಿ ಜೈಲು ಪಾಲಾಗಿದ್ದಾನೆ.. ಈತನಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೇನೇ ಅಂತ ಹೇಳ್ತಾ ಇವತ್ತಿನ ಎಪಿಸೋಡ್​ ಮುಗಿಸುತ್ತಿದ್ದೇವೆ.

02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
25:10ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!
23:06ಹೆಂಡತಿ ಕಾಟಕ್ಕೆ 'ಲೈವ್' ಸೂಸೈಡ್ ಯತ್ನ: ಗಂಡನ ನೌಟಂಕಿ ನಾಟಕ ಬಿಚ್ಚಿಟ್ಟ ಕುವೈತ್ ರಿಟರ್ನ್ ಪತ್ನಿ!
24:05ಅಮ್ಮ ಸತ್ತ ಮಗುವಿಗೆ ಆಸರೆಯಾಗದೇ, 3ನೇ ಮಹಡಿಯಿಂದ ತಳ್ಳಿದ ಮಲತಾಯಿ! ಸಾವಿನ ಸತ್ಯ ಬಿಚ್ಚಿಟ್ಟ ಸಿಸಿಟಿವಿ!
23:37ಸೀನಿಯರ್ ಲಾಯರ್ ಮದುವೆಯಾಗಲು ಹೆಂಡತಿಯನ್ನೇ ಮುಗಿಸಿದ ಗಂಡ; 2 ಬಾರಿ ಜಸ್ಟ್ ಮಿಸ್, 3ನೇ ಸಲ ಮಟಾಶ್!
Read more