Sep 14, 2020, 5:47 PM IST
ಬೆಂಗಳೂರು (ಸೆ. 14): ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ , ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಡುವಿನ ವಾಕ್ಸಮರ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಶ್ರೀಲಂಕಾ ಪ್ರವಾಸ ವಿಚಾರವಾಗಿ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ.
2016 ರಲ್ಲಿ ನಾನು ಸಚಿವರ ಜೊತೆ ಶ್ರೀಲಂಕಾಗೆ ಹೋಗಿದ್ದು ನಿಜ. ನಾಲ್ಕು ವರ್ಷದ ಹಿಂದಿನ ಕಥೆ. ಅದು ಈಗ ಅಪ್ರಸ್ತುತ. ಜಮೀರ್ ಅಹ್ಮದ್ ಅವರು ನನ್ನ ಹೆಸರು ಬಳಸಿ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ತನಿಖೆ ಯಾವ ಕಾರಣಕ್ಕೂ ದಾರಿ ತಪ್ಪಬಾರದು. ಒಂದು ವೇಳೆ ನನ್ನ ವಿರುದ್ಧ ಸಾಕ್ಷಿಗಳಿದ್ರೆ ಹೊರಗೆ ತರಲಿ. ತನಿಖೆಗೆ ಅವಕಾಶ ಮಾಡಿಕೊಡಲಿ' ಎಂದು ಕುಮಾರಸ್ವಾಮಿ, ಜಮೀರ್ ಸಾಹೇಬ್ರಿಗೆ ಸವಾಲು ಹಾಕಿದ್ದಾರೆ.
ಉಲ್ಟಾ ಹೊಡೆದ ಜಮೀರ್ ಭಾಯ್; ಸಂಬರಗಿ -ಜಮೀರಣ್ಣ ಈಗ ಭಾಯಿ ಭಾಯಿ!
'ನಾನು ಶ್ರೀಲಂಕಾಗೆ ಹೋಗಿದ್ದು ನಿಜ. ಅದು ಅಪರಾಧ ಅಲ್ಲ. ನನ್ನ ಹೆಸರು ಬಳಸಿ ಜಮೀರ್ ಎಸ್ಕೇಪ್ ಆಗುವುದು ಏನಿದೆ? ಜಮೀರ್ ಬಳಿ ಸ್ಫೋಟಕ ಮಾಹಿತಿ ಇದ್ರೆ ನೀಡಲಿ. ಯಾಕೆ ನನ್ನ ಹೆಸರನ್ನು ಪದೇ ಪದೇ ಯಾಕಾಗಿ ಪ್ರಸ್ತಾಪಿಸುತ್ತಿದ್ದಾರೆ? ತನಿಖೆಗೂ ಅದಕ್ಕೂ ಏನು ಸಂಬಂಧವಿದೆ? ಎಂದು ಎಚ್ಡಿಕೆ ಹೇಳಿದ್ದಾರೆ. ಹಳೆ ದೋಸ್ತಿಗಳ ಹೊಸ ಕುಸ್ತಿ ಬಗ್ಗೆ ಪೊಲಿಟಿಕಲ್ ಇನ್‌ಸೈಡ್ಸ್ ಇಲ್ಲಿದೆ ನೋಡಿ!