
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ, ಸತೀಶ್ ಜಾರಕಿಹೊಳಿ ನಾಯಕತ್ವವನ್ನು ಬೆಂಬಲಿಸಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಅಧಿಕಾರ ಸಂಘರ್ಷಕ್ಕೆ ಕಾರಣವಾಗಿದೆ. ಈ ಆಂತರಿಕ ಕಲಹ ಬಿಜೆಪಿಗೆ ಪ್ರಬಲ ಅಸ್ತ್ರವಾಗಿದ್ದು, ಪಕ್ಷದ ಹೈಕಮಾಂಡ್‌ಗೆ ಇದನ್ನು ಬಗೆಹರಿಸುವುದು ದೊಡ್ಡ ಸವಾಲಾಗಿದೆ.
ಸಿದ್ದು ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಾಡಿರೋ ಮಾತುಗಳು ಕೈ ಕೋಟೆಯಲ್ಲಿ ಕಂಪನಕ್ಕೆ ಕಾರಣವಾಗಿದೆ..ಅಂತರ್ಯುದ್ಧ ಮತ್ತಷ್ಟು ಜೋರಾಗುವಂತೆ ಮಾಡಿದೆ.. ಇದನ್ನೇ ಆಯುಧವಾಗಿಸಿಕೊಂಡಿರೋ ವಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ.