ತಂದೆ ಕಟ್ಟಿದ್ದ ಶಿವಸೈನ್ಯವೇ ಮಗನಿಗೆ ಮುಳುವಾಗಿದ್ದು ಏಕೆ?

Jun 24, 2022, 6:02 PM IST

ಬೆಂಗಳೂರು (ಜೂನ್ 24): ತಂದೆಗೆ ತಕ್ಕ ಮಗನಾಗಬೇಕು. ಗುರುವನ್ನು ಸೋಲಿಸುವ ಶಿಷ್ಯನಾಗಬೇಕು. ತಂದೆಗೆ ತಕ್ಕ ಮಗನಾದರೆ ಊರಿಗೆ ಹೆಮ್ಮೆ. ಗುರು ಸೋಲಿಸೋ ಶಿಷ್ಯನಾದ್ರೆ ಜಗತ್ತಿಗೆನೇ ಹೆಮ್ಮೆ ಅನ್ನೋ ಮಾತಿದೆ. ಆದ್ರೆ ಈ ಮಾತು ಕೇಳೋದಕ್ಕೆ ಚನ್ನಾಗಿರುತ್ತೆ, ಗಳಿಸೋದು ತುಂಬಾನೇ ಕಷ್ಟ. ಸದ್ಯದ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆಯನ್ನು ನೋಡಿದ್ರೆ ತಂದೆಗೆ ತಕ್ಕ ಮಗನಾಗೋದು ತುಂನಾನೇ ಕಷ್ಟ ಎಂದೆನಿಸುತ್ತದೆ. 

ಮಹಾರಾಷ್ಟ್ರದ (maharashtra) ಈಗಿನ ಪರಿಸ್ಥಿತಿಯನ್ನು ನೀಡಿದರೆ, ಉದ್ಧವ್ ಠಾಕ್ರೆ (Uddhav Thackeray) ಈಗಾಗಲೇ ಸೋಲು ಕಂಡಿದ್ದಾರೆ ಎನ್ನು ಅನುಮಾನ ಬರ್ತಿದೆ. ಸರ್ಕಾರ ಹೋದರೆ ಹೋಗಲಿ, ಬಾಳಾಸಾಹೇಬ್ ಠಾಕ್ರೆ (Balasaheb Thackeray) ಕಟ್ಟಿದ್ದ ಮರಾಠ ಅಸ್ಮಿತೆ, ಹಿಂದುತ್ವದ ಸಿದ್ಧಾಂತವಾದಿ ಶಿವಸೇನೆ ಎನ್ನುವ ಪಕ್ಷ ಉಳಿದುಕೊಳ್ಳಲಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದೆ.

ಉದ್ಧವ್‌ಗೆ ಬಿಗ್‌ ಶಾಕ್, ಶಿವಸೇನೆಯ 37 ಶಾಸಕರ ಬೆಂಬಲ ಪತ್ರದ ಬೆನ್ನಲ್ಲೇ ಮುಂಬೈನತ್ತ ಏಕನಾಥ್‌ ಶಿಂಧೆ!

ಬಂಡಾಯದ ಈ ಸನ್ನಿವೇಶದಲ್ಲಿ ಉದ್ಧವ್ ಠಾಕ್ರೆ ಇಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತೆ. ಒಂದು ವೇಳೆ ಕೊಂಚ ಯಾಮಾರಿದ್ರೂ ಸಹ ಮುಲಾಜಿಲ್ಲದೇ ಪಕ್ಷದಿಂದ ಅವರೇ ಹೊರ ಬರಬೇಕಾಗುತ್ತೆ. ಶಿವಸೇನೆ ಇಂದು ಈ ಪರಸ್ಥಿತಿಗೆ ಬರಲು ಕಾರಣ ಉದ್ಧವ್ ಠಾಕ್ರೆ ಉದ್ಧಟತನ ಎಂದರೆ ತಪ್ಪಾಗಲಾರದು.