ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

Published : Dec 05, 2024, 11:58 AM ISTUpdated : Dec 05, 2024, 12:00 PM IST

ಬಿಜೆಪಿ ಬಣಬಡಿದಾಟದ ಚೆಂಡು ಸದ್ಯ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ. ಯತ್ನಾಳ್ ಅವರೇ ಬನ್ನಿ.. ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್ಗೆ ಯತ್ನಾಳ್ ಉತ್ತರಿಸಿದ್ದಾರೆ. ಆರು ಪುಟಗಳ ಉತ್ತರ ಕೊಟ್ಟಿದ್ದು, ಆ ಉತ್ತರದಿಂದ ಭಿನ್ನಮತದದ ಬೆಂಕಿ ಆರುತ್ತಾ ಅಥವಾ ಮತ್ತೆ ಧಗಧಗಿಸುತ್ತಾ ಅನ್ನೋ ಆತಂಕ ಪಕ್ಷದೊಳಗೆ ಮನೆ ಮಾಡಿದೆ.

ಬೆಂಗಳೂರು(ಡಿ.05):  ನಿನಗೆ ನಾನು.. ನನಗೆ ನೀನು ಅಂತಿದ್ದೋರು.. ನಾನಾ ನೀನಾ ಅಂತಿದ್ದಾರೆ.  ಶಿಕಾರಿ ವೀರನ ಆಗಿನ ಆಪ್ತ..ಈಗಿನ ಆಜನ್ಮ ವೈರಿ..ಬಿಎಸ್ವೈ ಕುರ್ಚಿ ರಕ್ಷಣೆಗೆ ನಿಂತಿದ್ದ ಕಟ್ಟಪ್ಪ ತಿರುಗಿ ಬಿದ್ದದ್ದೇಕೆ..? ಅಪ್ಪನ ಮಗನ ವಿರುದ್ಧ ಯತ್ನಾಳ್ಗೆ ಯಾಕಿಂಥಾ ದ್ವೇಷ..? ಗಳಸ್ಯ-ಕಂಠಸ್ಯ ಸ್ನೇಹದಲ್ಲಿ ಸೇಡಿನ ಕಿಡಿ ಧಗಧಗಿಸಿದ್ದೇಕೆ..? ಇದು ಕಮಲ ಕೋಟೆಗೆ ಹೊತ್ತಿಕೊಂಡಿರುವ ಬಣ ಬಡಿದಾಟದ ಬೆಂಕಿಯ ಮೂಲದ ಚರಿತ್ರೆ, ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸ್ನೇಹ ಸೇಡು ಜ್ವಾಲಾಗ್ನಿ.

ಸದ್ಯ ರಾಜ್ಯ ಬಿಜೆಪಿಯ ಅಂತರ್ಯುದ್ಧ ದೆಹಲಿ ಅಂಗಳಕ್ಕೆ ತಲುಪಿದೆ. ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್‌ಗೆ ಯತ್ನಾಳ್ ಉತ್ತರಿಸಿದ್ದಾರೆ. ಹಾಗಿದ್ರೆ ಇಲ್ಲಿಗೆ ಈ ಅಂರ್ತಯುದ್ಧ ಅಂತ್ಯವಾಗುತ್ತಾ..? ಅಥವಾ ಮತ್ತಷ್ಟು ಸ್ಟೋಟವಾಗುತ್ತಾ ಅಂತ ನೋಡೋಣ. 

ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್​ಗಳಲ್ಲಿ ಪುಷ್ಪ ರಿಲೀಸ್; ಮೊದಲ ದಿನವೇ 300 ಕೋಟಿ ಮುಟ್ಟುತ್ತಾ?

ಬಿಜೆಪಿ ಬಣಬಡಿದಾಟದ ಚೆಂಡು ಸದ್ಯ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ. ಯತ್ನಾಳ್ ಅವರೇ ಬನ್ನಿ.. ನಮ್ಮ ಪ್ರಶ್ನೆಗೆ ಉತ್ತರಿಸಿ ಎಂದು ಶಿಸ್ತು ಪಾಲನಾ ಸಮಿತಿ ಕೊಟ್ಟಿದ್ದ ನೊಟೀಸ್ಗೆ ಯತ್ನಾಳ್ ಉತ್ತರಿಸಿದ್ದಾರೆ. ಆರು ಪುಟಗಳ ಉತ್ತರ ಕೊಟ್ಟಿದ್ದು, ಆ ಉತ್ತರದಿಂದ ಭಿನ್ನಮತದದ ಬೆಂಕಿ ಆರುತ್ತಾ ಅಥವಾ ಮತ್ತೆ ಧಗಧಗಿಸುತ್ತಾ ಅನ್ನೋ ಆತಂಕ ಪಕ್ಷದೊಳಗೆ ಮನೆ ಮಾಡಿದೆ. ನಮಗೆ ಯತ್ನಾಳ್ ಬಣವೂ ಬೇಡ.. ವಿಜಯೇಂದ್ರ ಬಣವೂ ಬೇಡ..ಇಬ್ಬರು ಮಾಡ್ತಿರೋದು ತಪ್ಪು ಎನ್ನುವ ತಟಸ್ಥ ಗುಂಪೊಂದು ಈಗ ಬಿಜೆಪಿಯೊಳಗೇನು ರೂಪುಗೊಂಡಿದೆ. ಆ ಬಗ್ಗೆ ಡೀಟೈಲ್ ಆಗಿ ತೋರಿಸ್ತೀವಿ. 

ಒಂದು ಕಡೆ ಯತ್ನಾಳ್ ಬಣ.. ಇನ್ನೊಂದು ಕಡೆ ವಿಜಯೇಂದ್ರ ಸೇನೆ.. ಈ ಮಧ್ಯೆ ತಟಸ್ಥರಾಗಿ ಇದ್ದವರು, ಬಣಬಡಿದಾಟವನ್ನ ಖಂಡಿಸೋಕೆ ಶುರು ಮಾಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ.
ರಾಜ್ಯ ಬಿಜೆಪಿಯ ಅಂತರ್ಯುದ್ಧ ಸದ್ಯ ದೆಹಲಿ ಅಂಗಳವನ್ನ ತಲುಪಿದೆ. ಹೈಕಮಾಂಡ್‌ನ ಮುಂದಿನ ನಿರ್ಧಾರ ಏನಾಗಿರುತ್ತೆ ಅನ್ನೋ ಕುತೂಹಲ, ಕಮಲ ಕೋಟೆಯೊಳಗೆ ಕೋಲಾಹಲ ಸೃಷ್ಟಿಸಿದೆ. 

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more