
ಸಿದ್ದರಾಮಯ್ಯನವರ ಅಹಿಂದ ನಾಯಕತ್ವಕ್ಕೆ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರಗೊಂಡಿದೆ. ಸತೀಶ್ ಜಾರಕಿಹೊಳಿ ಪ್ರಬಲ ಆಕಾಂಕ್ಷಿಯಾಗಿ ಕಾಣಿಸಿಕೊಂಡಿದ್ದು, ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಗಳು ಈ ಸಂಘರ್ಷಕ್ಕೆ ಮತ್ತಷ್ಟು ಕಿಡಿ ಹೊತ್ತಿಸಿವೆ.
ಅಹಿಂದ ಅನ್ನೋದು ಮಹಾಶಕ್ತಿ.. ಅದ್ರ ಜವಾಬ್ದಾರಿ ಹೊರೋದೆ ದೊಡ್ಡ ಸವಾಲು.. ಆ ಸವಾಲನ್ನ ಗೆಲ್ಲೋದಿಕ್ಕೆ ಬೆಳಗಾವಿ ಸಾಹುಕಾರ್ಗೆ ಸಾಧ್ಯವಾಗುತ್ತಾ.? ಸಿದ್ದು ಸ್ಥಾನವನ್ನ ಸಂಪೂರ್ಣವಾಗಿ ತುಂಬ್ತಾರಾ ಸತೀಶ್..? ಅಹಿಂದ ನಾಯಕತ್ವದ ಉತ್ತರಾಧಿಕಾರಿಯಾಗಲು ಹಲವರು ಉತ್ಸುಕರಾಗಿದ್ದಾರೆ. ಅಹಿಂದ ಯುದ್ಧದಲ್ಲಿ ಹಲವು ರಣಕಲಿಗಳಿದ್ದಾರೆ.. ಅವಕಾಶ ಸಿಕ್ರೆ ಅಹಿಂದ ಕೋಟೆಗೆ ಅಧಿಪತಿಯಾಗೋ ಆಸೆ ಅವರದ್ದು.. ಈ ಮೂಲಕ ಕೈ ಸಾಮ್ರಾಜ್ಯದಲ್ಲಿ ಒಂದೇ ಸಮಯದಲ್ಲಿ ಎರಡು ಕಿಡಿ ಹೊತ್ತಿದಂತಾಗಿದೆ.