ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 'ನಮ್ಮವರಿಂದಲೇ ಬೆನ್ನಿಗೆ ಚೂರಿ' ಮತ್ತು 'ನೆರಳನ್ನೇ ನಂಬಬೇಡಿ' ಎಂಬಂತಹ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಈ ಹೇಳಿಕೆಗಳ ಹಿಂದಿನ ಮರ್ಮವೇನು, ಡಿಕೆಶಿ ಗುರಿ ಯಾರು ಮತ್ತು ಅವರ ಮುಂದಿನ ರಾಜಕೀಯ ನಡೆ ಹೈಕಮಾಂಡ್ ಕಡೆಗಿದೆಯೇ ಎಂಬ ಚರ್ಚೆ ಹುಟ್ಟುಹಾಕಿದೆ.
ಬಂಡೆ ಬೆನ್ನಿಗೆ ಚೂರಿ? ನಂಬಿಕಸ್ಥ ಬಂಟನಿಗೆ ನಂಬಿದವರಿಂದಲೇ ನಂಬಿಕೆ ದ್ರೋಹವಾಯ್ತಾ..? ಕೆರಳಿದ್ರಾ ಬಂಡೆ..? ಕೆರಳಿ ನಿಂತಿತಾ ಬೂದಿ ಮುಚ್ಚಿದ ಕೆಂಡ..? ದಂಡಿಗೂ ದಾಳಿಗೂ ಹೆದರದ ದಂಡನಾಯಕನ ನಿಗೂಢ ಮರ್ಮ ಸಂದೇಶ