Mar 24, 2023, 5:03 PM IST
ನ್ಯೂಸ್ ಅವರ್ ಸ್ಪೆಶಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ-ರಾಜಕಾರಣಿ ಉಪೇಂದ್ರ ಹತ್ತು ಹಲವಾರು ವಿಚಾರಗಳ ಬಗ್ಗೆ ಸಂವಾದ ನಡೆಸಿದರು. ದೇಶ ವೈಚಾರಿಕತೆಯ ರಾಷ್ಟ್ರವಾಗಬೇಕು ಅಂದ್ರೆ ಜನ ವೈಚಾರಿಕತೆಯನ್ನು ಅಳವಡಿಸಿಕೊಳ್ಳಬೇಕು ಇಲ್ಲಿ ಗೆಲುವು ಸೋಲು ಮುಖ್ಯ ಅಲ್ಲ ಎಂದು ಅಭಿಪ್ರಯಾ ಪಟ್ಟಿದ್ದಾರೆ, ಇನ್ನು ನಾಯಕತ್ವದ ಬಗ್ಗೆ ನನಗೆ ನಂಬಿಕೆ ಇಲ್ಲ , ನನಗೆ ಏನು ಗೊತ್ತಿಲ್ಲ ನಾನು ಏನು ಮಾಡಲ್ಲ ನೀವು ಹೇಳುವುದು ಬಿಟ್ಟು ಅನ್ನುವುದು ಪ್ರಜಾಕೀಯ, ನನಗೆ ಎಲ್ಲ ಗೊತ್ತು ನಾನು ಎಲ್ಲ ಮಾಡುತ್ತೇನೆ ನೀವು ಹೇಳುವುದು ಬಿಟ್ಟು ಅನ್ನುವುದು ರಾಜಕೀಯ ಜನರಿಗೆ ಏನು ಬೇಕು ಅದೇ ಪ್ರಣಾಳಿಕೆ ಎಂದು ಉಪೇಂದ್ರ ತಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಯಾಗಿದ್ದರು ರಾಜನಾಗಿ ಬದುಕಬೇಕು ಎಂದು ಆಸೆ ಪಡುತ್ತೇನೆ. ಹೋರಾಟ ಮಾಡಿ ಸ್ವಾತಂತ್ರ ಬಂತು ಎಂದು ಹೇಳುತ್ತಾರೆ . ಆಗ ಬೇರೆ ದೇಶದ ವಿರುದ್ದ ಹೋರಾಡುವುದು ಅನಿವಾರ್ಯವಾಗಿತ್ತು, ಇಗ ಯಾಕೆ ಹೋರಾಟ ಮಾಡಬೇಕು ಎಲ್ಲ ನಮ್ಮ ಅಣ್ಣ ತಮ್ಮಂದಿರು ಎಂದು ಹೇಳಿದರು. ಜನ ಗೆಲ್ಲುವರೆಗೆ ಅಭ್ಯರ್ಥಿ ಗೆಲ್ಲಲು ಆಗುವುದಿಲ್ಲ. ರಾಜಕೀಯ ಮನಸ್ಥಿತಿಯಲ್ಲಿ ಪ್ರಜಾಕೀಯಕ್ಕೆ ವೋಟ್ ಹಾಕಬೇಡಿ ಎಂದು
ಹೇಳಿದರು.