ಎಎಪಿ ಕೇವಲ ರಾಜಕೀಯ ಪಕ್ಷ ಅಲ್ಲ ಇದೊಂದು ಕ್ರಾಂತಿ: ಕೇಜ್ರಿವಾಲ್

Mar 10, 2022, 7:19 PM IST

ನವದೆಹಲಿ(ಮಾ.10): ಪಂಜಾಬ್‌ (Punjab) ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಆಮ್ ಆದ್ಮಿ ಪಕ್ಷ(AAP) ಸ್ಪಷ್ಟ ಬಹುಮತ ಪಡೆದಿದ್ದು, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ‘ಕ್ರಾಂತಿ’ ತಂದ ರಾಜ್ಯದ ಜನರನ್ನು ಅಭಿನಂದಿಸಿದ್ದಾರೆ. ಧುರಿ ಕ್ಷೇತ್ರದಿಂದ ಮುನ್ನಡೆ ಸಾಧಿಸುತ್ತಿರುವ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರೊಂದಿಗೆ ಅವರು ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

5 STATES ELECTION: ಮೋದಿ ನಂಬಿ ಮತ ನೀಡಿದವರಿಗೆ ಧನ್ಯವಾದ ಎಂದ ಕೇಂದ್ರ ಸಚಿವ ನಾರಾಯಣಸ್ವಾಮಿ

ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ದೆಹಲಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಇಂದು ಪಂಜಾಬ್‌ ನಲ್ಲಿ ಆಮ್ ಆದ್ಮಿ ಪಕ್ಷದ ಅದ್ಭುತ ವಿಜಯದೊಂದಿಗೆ ದೇಶದ ಜನ "ಕೇಜ್ರಿವಾಲ್ ಭಯೋತ್ಪಾದಕನಲ್ಲ, ಅವರು ಈ ದೇಶದ ಮಗ, ನಿಜವಾದ ದೇಶಭಕ್ತ" ಎಂದು ಮಾತನಾಡಿದ್ದಾರೆ ಎಂದರು. ಎಎಪಿ ಕೇವಲ "ಒಂದು ರಾಜಕೀಯ ಪಕ್ಷ ಅಲ್ಲ" - ಇದು ಒಂದು ಕ್ರಾಂತಿ ಎಂದು ಅರವಿಂದ್ ಕೇಜ್ರಿವಾಲ್ (arvind kejriwal) ಅವರು ಹೇಳಿದ್ದಾರೆ. "ಇದು ಬದಲಾವಣೆಯ ಸಮಯ, ಇಂಕ್ವಿಲಾಬ್(ಕ್ರಾಂತಿ). ಎಎಪಿಗೆ ಸೇರುವಂತೆ ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಎಎಪಿ ಕೇವಲ ಒಂದು ಪಕ್ಷವಲ್ಲ. ಇದು ಕ್ರಾಂತಿಯ ಹೆಸರು" ಎಂದು ದೆಹಲಿಯಲ್ಲಿ ಎಎಪಿ ಮುಖ್ಯಸ್ಥರು ಹೇಳಿದ್ದಾರೆ.