
ಒಂದು ಸಂಗ್ರಾಮಕ್ಕೆ ಸಿದ್ಧವಾಗ್ತಿದ್ದಾರೆ ರಾಹುಲ್ ಗಾಂಧಿ.. ಅದಕ್ಕವರು ತಮ್ಮ ನೆಚ್ಚಿನ ಅಖಾಡವನ್ನೇ ಆಯ್ಕೆ ಮಾಡ್ಕೊಂಡಿದ್ದಾರೆ.
ಸ್ಫೋಟಿಸಿದ 16 ಕ್ಷೇತ್ರಗಳ ರಹಸ್ಯ..! ಕರುನಾಡ ನೆಲ.. ಹೋರಾಟದ ಕಿಚ್ಚು.. ರಾಷ್ಟ್ರವ್ಯಾಪಿ ಫಲ..! ರಾಜ್ಯದಿಂದಲೇ ರಣಾಂಗಣಕ್ಕೆ ನುಗ್ಗೋದ್ಯಾಕೆ ರಾಗಾ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಾಹುಲ್ ಆಟಂ ಬಾಂಬ್. ಒಂದು ಸಂಗ್ರಾಮಕ್ಕೆ ಸಿದ್ಧವಾಗ್ತಿದ್ದಾರೆ ರಾಹುಲ್ ಗಾಂಧಿ.. ಅದಕ್ಕವರು ತಮ್ಮ ನೆಚ್ಚಿನ ಅಖಾಡವನ್ನೇ ಆಯ್ಕೆ ಮಾಡ್ಕೊಂಡಿದ್ದಾರೆ. ಸಂಗ್ರಾಮಕ್ಕೆ ಧುಮುಕೋ ಮೊದಲೇನೆ ತಮ್ಮ ಬಳಿಯಿರೋ ಅಸ್ತ್ರವೇನು ಅಂತಲೂ ಬಹಿರಂಗಪಡಿಸಿದ್ದಾರೆ.. ಹಾಗಿದ್ರೆ ಏನಿದು ಕೈ ಅಧಿನಾಯಕನ ಸಂಗ್ರಾಮದ ಸ್ಟೋರಿ..? ಯಾವುದು ಆ ಅಖಾಡ..? ಯಾವುದು ಅವರು ಝಳಪಿಸಿರೋ ಆ ಅಸ್ತ್ರ..? ಹಾಗಿದ್ರೆ, ಕರುನಾಡಿನಿಂದ ಶುರುವಾಗಿ ದೇಶವ್ಯಾಪಿ ಕಾಂಗ್ರೆಸ್ಗೆ ಫಲ ಕೊಟ್ಟ ಅಂಶಗಳ್ಯಾವು..? ಈಗಿನ ಹೋರಾಟವು ಕರ್ನಾಟಕದಿಂದಲೇ ಆರಂಭವಾಗೋದ್ರ ಹಿಂದಿನ ಕಾರಣಗಳೇನು.
ರಾಜ್ಯದಿಂದ ರಾಷ್ಟ್ರವ್ಯಾಪಿ.. ಕೈ ಅಧಿನಾಯಕ ರಾಹುಲ್ ಗಾಂಧಿಗೆ ಫಲ ತಂದುಕೊಟ್ಟಿದೆ ಈ ನೆಲ.. ! ಭಾರತ್ ಜೋಡೋ.. ಗ್ಯಾರಂಟಿ.. ಜಾತಿ.. ಕರ್ನಾಟದಲ್ಲೇ ಸೃಷ್ಟಿಯಾದ ಕಾಂಗ್ರೆಸ್ನ ಆ ಬಲಿಷ್ಠ ಅಸ್ತ್ರಗಳು ಯಾವ್ಯಾವು..? ನೋಡಿ, ಮತಗಳ್ಳತನಕ್ಕೆ ಇವೇ ಸಾಕ್ಷಿಗಳು ಅಂತ ರಾಹುಲ್ ಗಾಂಧಿ ದಾಖಲೆಗಳನ್ನ ಬಹಿರಂಗ ಪಡಿಸ್ತಾ ಇದ್ಹಾಗೆ, ಚುನಾವಣಾ ಆಯೋಗ ವಿಪಕ್ಷ ನಾಯನಿಗೆ ತಿರುಗೇಟು ಕೊಟ್ಟಿದೆ.. ಹಾಗಿದ್ರೆ, ರಾಹುಲ್ ಆರೋಪದ ಬಗ್ಗೆ ಆಯೋಗ ಹೇಳಿದ್ದೇನು. ಮತಗಳ್ಳತನವಾಗಿದೆ.. ಚುನಾವಣೆಯಲ್ಲಿ ಅಕ್ರಮವಾಗಿದೆ ಅಂತ ರಾಹುಲ್ ಗಾಂಧಿ ಆರೋಪಿಸಿ ಒಂದಿಷ್ಟು ದಾಖಲೆಗಳನ್ನ ಬಿಡುಗಡೆ ಮಾಡ್ತಿದ್ಹಾಗೆ, ಚುನಾವಣಾ ಆಯೋಗ ರಿಯಾಕ್ಟ್ ಮಾಡಿ ವಿಪಕ್ಷ ನಾಯಕರಿಗೆ ತಿರುಗೇಟು ಕೊಟ್ಟಿದೆ.