ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!

Published : Dec 13, 2025, 10:33 AM IST

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್​..! ಊಟ.. ಕೂಟ.. ಅಧಿಕಾರ ಅಗ್ನಿಯ ಪ್ರಚಂಡ ಆಟ..! ಸಿದ್ದು ಪುತ್ರನ ವಿರುದ್ಧ ಕೆರಳಿ ನಿಂತ ಡಿಕೆ ದಂಡು..! ‘‘ನಾನೇ ಕಟ್ಟಿದ ಮನೆ.. ನ್ಯಾಯ ಕೇಳ್ತೀನಿ’’ ಎಂದರಾ ಬಂಡೆ..?

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್​..! ಊಟ.. ಕೂಟ.. ಅಧಿಕಾರ ಅಗ್ನಿಯ ಪ್ರಚಂಡ ಆಟ..! ಸಿದ್ದು ಪುತ್ರನ ವಿರುದ್ಧ ಕೆರಳಿ ನಿಂತ ಡಿಕೆ ದಂಡು..! ‘‘ನಾನೇ ಕಟ್ಟಿದ ಮನೆ.. ನ್ಯಾಯ ಕೇಳ್ತೀನಿ’’ ಎಂದರಾ ಬಂಡೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಊಟ ಕೂಟ ಚದುರಂಗದಾಟ. ಒಟ್ಟಾಗಿ ಬ್ರೇಕ್​ಫಾಸ್ಟ್ ಮಾಡಿ ಒಗ್ಗಟ್ಟಿನ ಸಂದೇಶ ರವಾನಿಸಿದ್ರು ಸಿದ್ದು-ಡಿಕೆ.. ಇದೀಗ ಅವರಿಬ್ಬರೇ ತಮ್ಮ ತಮ್ಮ ಪಡೆ ಕಟ್ಕೊಂಡು ಪ್ರತ್ಯೇಕ ಡಿನ್ನರ್ ಮೀಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಕೂಡ ಊಟದ ನೆಪದಲ್ಲಿ ತಮ್ಮ ಸೇನೆಯನ್ನ ಒಟ್ಟುಗೂಡಿಸಿದ್ದಾರೆ.

ಹಾಗಿದ್ರೆ ಈ ಡಿನ್ನರ್ ಮೀಟಿಂಗ್ ಮೂಲಕ  ತಮ್ಮ ಆಪ್ತರಿಗೆ, ಪಕ್ಷದ ಹೈಕಮಾಂಡ್​ಗೆ ಹಾಗೇನೆ ಎದುರಾಳಿಗಳಿಗೆ ಡಿಕೆ ಕೊಟ್ಟ ಸಂದೇಶವೇನು..? ಊಟದ ನೆಪದಲ್ಲಿ ಕನಕಾಧಿಪತಿ ಉರುಳಿಸಿರೋ ದಾಳ ಎಂಥದ್ದು.? ಕೈ ಸಾಮ್ರಾಜ್ಯದ ಸಿಂಹಾಸನ ಸಂಘರ್ಷವು ಮತ್ತೆ ಮತ್ತೆ ವಿಪಕ್ಷಕ್ಕೆ ಅಸ್ತ್ರವಾಗ್ತಿದೆ. ಇದೀಗ ಡಿನ್ನರ್ ಮೀಟಿಂಗ್ ವಿಚಾರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬಿದ್ದಿದೆ ಕಮಲ ಪಡೆ. ಒಂದು ಕಡೆ ಸದನ ನಡೆಯುತ್ತಿದ್ರೆ, ಇನ್ನೊಂದು ಕಡೆ ಕೈ ಸಾಮ್ರಾಜ್ಯದಲ್ಲಿ ಸಿಂಹಾಸನ ಕದನವು ಮುಂದುವರೆದಿದೆ. ಇದುವೇ ಈಗ ವಿಪಕ್ಷದಲ್ಲಿ ಕೂತಿರೋ ಕಮಲ ಪಡೆಗೆ ಅಸ್ತ್ರವಾಗಿರೋದು.

ಇದೇ ಅಸ್ತ್ರವನ್ನೇ ಹಿಡಿದು ಸರ್ಕಾರದ ವಿರುದ್ಧ ಮತ್ತೆ ಮತ್ತೆ ಝಳಪಿಸ್ತಾಯಿರೋದು. ಕುರ್ಚಿ ಕದನವನ್ನ ಕಂಪ್ಲೀಟ್ ಆಗಿ ಮುಗಿಸೋಕೆ ಹೈಕಮಾಂಡ್ ಒಂದು ಮುಹೂರ್ತ ಫಿಕ್ಸ್ ಮಾಡಿದೆ ಎನ್ನಲಾಗ್ತಿದೆ. ಆದ್ರೆ ಆ ಮುಹೂರ್ತದ ಬಗ್ಗೆ ಕೇಳಿದ್ರೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇ ಬೇರೆ.. ಹಾಗಿದ್ರೆ ಈ ಬಗ್ಗೆ ಸಿದ್ದು ಹೇಳಿದ್ದೇನು. ಕರುನಾಡಿನ ಸಿಂಹಾಸನ ಸಮರವನ್ನ ಸಮಾಪ್ತಿಗೊಳಿಸೋಕೆ ಪಕ್ಷದ ಹೈಕಮಾಂಡ್ ಅಲರ್ಟ್​ ಆಗಿದೆ. ಇದಕ್ಕೊಂದು ಮುಹೂರ್ತ ಕೂಡ ಫಿಕ್ಸ್ ಆಗಿದೆ ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನ ಕೇಳಿದ್ರೆ ಅದಕ್ಕವರು ಕೊಟ್ಟ ಉತ್ತರವೇ ಬೇರೆ.

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
Read more