Mar 7, 2023, 2:06 PM IST
ಬೆಳಗಾವಿ (ಮಾ.07): ಸಾಹುಕಾರ ರಮೇಶ್ ಜಾರಕಿಹೊಳಿ Vs ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವಿನ ಓಟ ಮುಂದುವರಸಲು ಅಖಾಡಕ್ಕೆ ಇಳಿದಿದ್ದಾರೆ. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಸವಾಲ್ ಹಾಕಿದ್ದಾರೆ. 50 ಅಡಿ ಎತ್ತರದ ಶಿವಾಜಿ ಪ್ರತಿಮೆ ಲೋಕಾರ್ಪಣೆ ಕಾರ್ಯ ರಾಜಕೀಯ ರಣರಂಗವಾಗಿ ಮಾರ್ಪಟ್ಟಿದೆ.
ಶಿವಾಜಿ ಪ್ರತಿಮೆ ಉದ್ಘಾಟನೆ ರಾಜಕೀಯ ಜಿದ್ದಾಜಿದ್ದಿಯ ಜ್ವಾಲಾಮುಖಿಯಾಗಿ ಧಗಧಗಿಸಲು ಕಾರಣ ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಪ್ರತಿಷ್ಠೆಯೇ ಪ್ರಮುಖ ಕಾರಣವಾಗಿದೆ. ಹಾಗಾದ್ರೆ ಈ ಜಟಾಪಟಿಯಲ್ಲಿ ಗೆದ್ದದ್ದು ಯಾರು..? ಸಾಹುಕಾರನಾ..? ಹೆಬ್ಬಾಳ್ಕರಾ..? ಇದ್ರಿಂದ ಶಾಸಕಿ ಹೆಬ್ಬಾಳ್ಕರ್"ಗೆ ಆದ ರಾಜಕೀಯ ಲಾಭವೇನು..? ಜಾರಕಿಹೊಳಿ ವಿರುದ್ಧ ಯುದ್ಧ ಸಾರಿರೋ ಲಕ್ಷ್ಮೀ ಹೆಬ್ಬಾಳ್ಕರ್ ಹಿಂದೆ ಬೆಳಗಾವಿ ಬಿಜೆಪಿಯಲ್ಲಿನ ಜಾರಕಿಹೊಳಿ ವಿರೋಧಿ ಗುಂಪು ನಿಂತಿದ್ಯಾ..? ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.
ಒಂದ್ಕಡೆ ಲಕ್ಷ್ಮೀ ಪಟಾಕಿ, ಮತ್ತೊಂದ್ಕಡೆ ಸಾಹುಕಾರನ ಸೇಡು... ಈ ಜಟಾಪಟಿಗೆ ಶಿವಾಜಿ ಪ್ರತಿಮೆ ಉದ್ಘಾಟನೆಯೇ ವೇದಿಕೆ. ಹಠ, ಕೋಪ, ದ್ವೇಷದ ಕಾರಣಗಳಿಗಾಗಿ ರಾಜಕಾರಣ ತನ್ನ ಮಗ್ಗುಲು ಬದಲಿಸಿದ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೆ ರಾಜ್ಯ ರಾಜಕಾರಣವೂ ಕಾಲ ಕಾಲಕ್ಕೆ ಸಾಕ್ಷಿಯಾಗುತ್ತಾ ಬಂದಿದೆ. ಹಾಗಾದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ಹೊತ್ತಿಕೊಂಡಿರೋ ಸೇಡಿನ ಜ್ವಾಲೆ, ರಾಜ್ಯ ರಾಜಕಾರಣಕ್ಕೆ ಟ್ವಿಸ್ಟ್ ಕೊಡಲಿದ್ಯಾ..? ಎಂಬುದನ್ನು ನಾವು ಕಾದುನೋಡಬೇಕಿದೆ.