
ಕೈ ಅಧ್ಯಕ್ಷರ ಆಕ್ರೋಶದ ಆರೋಪ..! ಐದು ರೀತಿ ಮತಗಳ್ಳತನ.. ಆಯೋಗಕ್ಕೆ ಪಂಚ ಪ್ರಶ್ನೆಗಳು.. ರಾಗಾ ಗದಾಪ್ರಹಾರ.. ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ವೋಟ್ ಚೋರಿ ವಾರ್.
ಮತಗಳ್ಳತನ ಆರೋಪ ಮಾಡ್ತಾ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಮೇಲೆ ಮಹಾಯುದ್ಧ ಸಾರಿದೆ ಕಾಂಗ್ರೆಸ್..! ರಾಜ್ಯದಲ್ಲಿ ರಾಹುಲ್ ರಣರೋಷ.. ರಾಷ್ಟ್ರಕ್ಕೆ ಸಂದೇಶ..! ಅದೊಂದು ಸೋಲಿನ ರಹಸ್ಯ ಬಿಚ್ಚಿಟ್ಟು ಕೈ ಅಧ್ಯಕ್ಷರ ಆಕ್ರೋಶದ ಆರೋಪ..! ಐದು ರೀತಿ ಮತಗಳ್ಳತನ.. ಆಯೋಗಕ್ಕೆ ಪಂಚ ಪ್ರಶ್ನೆಗಳು.. ರಾಗಾ ಗದಾಪ್ರಹಾರ.. ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ವೋಟ್ ಚೋರಿ ವಾರ್.. ಮತಗಳ್ಳತನದಿಂದಲೇ ಮೋದಿ ಪ್ರಧಾನಿ ಪಟ್ಟದ ಮೇಲೇ ಕೂತಿರೋದು ಅಂತ ಆರೋಪಿಸ್ತಾಯಿದ್ದಾರೆ ರಾಹುಲ್ ಗಾಂಧಿ.. ಆದಕ್ಕವರು ಒಂದು ಅಂಕಿ ಅಂಶವನ್ನ ಸಹ ಕೊಡ್ತಿದ್ದಾರೆ.
ಹಾಗಿದ್ರೆ, ವಿಪಕ್ಷ ನಾಯಕರು ಕೊಡ್ತಿರೋ ಆ ಅಂಕಿ ಅಂಶಗಳೇನು? ಮತಗಳ್ಳತನ ಮಾಡಿ ಮೋದಿ ಪ್ರಧಾನಿಯಾಗಿದ್ದಾರೆ.. ಹೀಗೋಂದು ಗಂಭೀರ ಆರೋಪವನ್ನ ಮಾಡ್ತಿದ್ದಾರೆ ರಾಹುಲ್ ಗಾಂಧಿ.. ಹಾಗಿದ್ರೆ ವಿಪಕ್ಷ ನಾಯಕರು ಯಾವ ಆಧಾರದಲ್ಲಿ ಈ ಆರೋಪವನ್ನ ಮಾಡ್ತಿದ್ದಾರೆ..? ಇತ್ತ ಕಾಂಗ್ರೆಸ್ ಹೋರಾಟ ನಡೆಸಿದ್ರೆ, ಅತ್ತ ಕೇಸರಿ ಕಟ್ಟಾಳುಗಳು ರಾಗಾ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಒಂದು ಸವಾಲನ್ನ ಸಹ ಹಾಕಿದ್ದಾರೆ.. ಹಾಗಿದ್ರೆ ಏನದು ಸವಾಲು? ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ ರಾಹುಲ್ ಗಾಂಧಿ ರಣಕಹಳೆ ಮೊಳಗಿಸಿದ್ರೆ, ಕೇಸರಿ ಕಟ್ಟಾಳುಗಳು ವಿಪಕ್ಷ ನಾಯಕ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದ್ರ ಜೊತೆಗೆ ಒಂದು ಸವಾಲನ್ನ ಸಹ ಹಾಕಿದ್ದಾರೆ.