ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ? ಕೈ ಪಡೆಯಿಂದಲೂ  ಕೇಳಿ ಬರ್ತಿದೆ ಅಪಸ್ವರದ ಧ್ವನಿ!

ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ? ಕೈ ಪಡೆಯಿಂದಲೂ ಕೇಳಿ ಬರ್ತಿದೆ ಅಪಸ್ವರದ ಧ್ವನಿ!

Published : Aug 14, 2025, 04:17 PM IST

ಧರ್ಮಸ್ಥಳದಲ್ಲಿ ಒಂದಾದ ಮೇಲೆ ಒಂದು ಸ್ಥಳದಲ್ಲಿ ಮಣ್ಣು ಹೊರ ತೆಗೆಯಲಾಗ್ತಲೇ ಇದೆ.. ಆದ್ರೆ ಅನಾಮಿಕ ದೂರುದಾರ ಹೇಳಿದ ಹಾಗೆ ಅಲ್ಲಿ ಯಾವ ಅಸ್ಥಿಯೂ ಸಿಗ್ತಿಲ್ಲ.. ಈ ಮಧ್ಯೆ ರಾಜಕೀಯ ಜಟಾಪಟಿ ಜೋರಾಗಿದೆ.

ಬುರುಡೆ ಶೋಧ..ಖಾಲಿ ಗುಂಡಿ.. ಒಡೆದ ತಾಳ್ಮೆ ಕಟ್ಟೆ..! ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ..? ಸದನದೊಳಗೂ ಕಿಚ್ಚು. ಹೊರಗೂ ಆಕ್ರೋಶ.. ಶುರು ‘ಧರ್ಮ’ ಯುದ್ಧ..! ಧರ್ಮಸ್ಥಳ ಚಲೋ. ಹೋರಾಟಕ್ಕೆ ಸಜ್ಜಾದ ಕಮಲ ಪಡೆ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಧರ್ಮಸ್ಥಳ ಕಿಚ್ಚು. ಬುರುಡೆ ಬೆಂಕಿ. ದಿನಗಳು ಉರುಳುತ್ತಲೇ ಇವೆ.. ಧರ್ಮಸ್ಥಳದಲ್ಲಿ  ಒಂದಾದ ಮೇಲೆ ಒಂದು ಸ್ಥಳದಲ್ಲಿ ಮಣ್ಣು ಹೊರ ತೆಗೆಯಲಾಗ್ತಲೇ ಇದೆ. ಆದ್ರೆ ಅನಾಮಿಕ ದೂರುದಾರ ಹೇಳಿದ ಹಾಗೆ ಅಲ್ಲಿ ಯಾವ ಅಸ್ಥಿಯೂ ಸಿಗ್ತಿಲ್ಲ.. ಈ ಮಧ್ಯೆ ರಾಜಕೀಯ ಜಟಾಪಟಿ ಜೋರಾಗಿದೆ. ಧರ್ಮಸ್ಥಳ ಚಲೋ ಅಂತ ಬಿಜೆಪಿ ಸಜ್ಜಾಗಿದ್ರೆ, ಕೈ ಸಾಮ್ರಾಜ್ಯದೊಳಗಿಂದಲೇ ಇನ್ನೆಷ್ಟು ಗುಂಡಿ ಅಗಿತೀರಿ ಅನ್ನೋ ಪ್ರಶ್ನೆಗಳು ಕೇಳಿ ಬರ್ತಿವೆ. ಇಷ್ಟೆಲ್ಲದರ ಮಧ್ಯೆ ರಾಜ್ಯಾದ್ಯಂತ ಜನರು ಕೂಡ ಧರ್ಮಸ್ಥಳದ ಪರವಾಗಿ ಬೀದಿಗಿಳಿದಿದ್ದಾರೆ.

ಇನ್ನೆಷ್ಟು ದಿನ ಅನಾಮಿಕ ತೋರಿಸಿದ ಕಡೆಯೆಲ್ಲಾ ಗುಂಡಿ ಅಗೆಯುತ್ತೀರಿ ಅನ್ನೋ ಪ್ರಶ್ನೆಯನ್ನ ಜನ್ರು ಕೇಳೋಕೆ ಶುರು ಮಾಡಿದ್ದಾರೆ.. ರಾಜ್ಯಾದ್ಯಂತ ಧರ್ಮಸ್ಥಳದ ಪರವಾಗಿ ಪ್ರತಿಭಟನೆಗಳೂ ನಡೆದಿವೆ. ರಾಜ್ಯಾದ್ಯಂತ ಸಿಡಿದೆದ್ದಿರೋ ಧರ್ಮಸ್ಥಳ ಮಂಜುನಾಥ ಸ್ವಾಮಿ ಭಕ್ತರು, ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ ಅಂತ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಾಗಿದ್ರೆ ರಾಜ್ಯಾದ್ಯಂತ ಹೇಗಿತ್ತು ಭಕ್ತರ ಹೋರಾಟ..? ಅವರ ಆಗ್ರಹವೇನು..?  ಆಕ್ರೋಶವೇನು..? ಭಕ್ತರು ಹೀಗೆ ಬೀದಿಗಿಳಿದು ಹೋರಾಡ್ತಿದ್ರೆ, ಅತ್ತ ಅನಾಮಿಕ ದೂರುದಾರ ಮತ್ತೊಂದು ಹೊಸ ಬೇಡಿಕೆಯನ್ನ ಎಸ್​ಐಟಿ ಮುಂದಿಟ್ಟಿದ್ದಾನೆ. ಅನಾಮಿಕ ದೂರುದಾರ ಮತ್ತೊಂದು ಬಾಂಬ್ ಸಿಡಿಸಿದ್ದಾನೆ. ಹೊಸದಾಗಿ 30 ಜಾಗ ಗುರುತಿಸ್ತೀನಿ. ಅಲ್ಲಿ 300ಕ್ಕೂ ಹೆಚ್ಚು ಹೆಣ ಇದ್ದಾವೆ. ಅಲ್ಲಿ ಶೋಧಕಾರ್ಯ ನಡೆಸುವಂತೆ ಮುಸುಕುಧಾರಿ ಎಸ್​ಐಟಿ ಮುಂದೆ ಬೇಡಿಕೆ ಇಟ್ಟಿದ್ದಾನಂತೆ.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more