ರಾಜ್ಯ ರಾಜಕಾರಣದಲ್ಲಿ ಸಿದ್ದರಾಮೋತ್ಸವದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಇದು ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೊಂದು ಕಡೆ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸಿದ್ದರಾಮಯ್ಯನವರ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ ಮಾಡಿದೆ.
ಬೆಂಗಳೂರು (ಜು. 20): ರಾಜ್ಯ ರಾಜಕಾರಣದಲ್ಲಿ ಸಿದ್ದರಾಮೋತ್ಸವದ (Siddaramothsava) ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಇದು ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೊಂದು ಕಡೆ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸಿದ್ದರಾಮಯ್ಯನವರ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ ಮಾಡಿದೆ.
'ನನಗೆ 75 ವರ್ಷ ತುಂಬುತ್ತಿದೆ. ಇದುವರೆಗೂ ನಾನು ಹುಟ್ಟುಹಬ್ಬ ಆಚರಿಸಿಲ್ಲ, ಕೇಕ್ ಕಟ್ ಮಾಡಿಲ್ಲ. ನಮ್ಮ ಸ್ನೇಹಿತರು, ಹಿತೈಶಿಗಳು, ಬೆಂಬಲಿಗರು ಎಲ್ಲಾ ಮಾಡೋಣ ಸರ್ ಅಂದ್ರು, ಆಯ್ತು ಅಂದೆ. ಇದಕ್ಕೆ ರಾಜಕೀಯ ಬಣ್ಣ ಕೊಡುವುದು ಅನಗತ್ಯ, ಚುನಾವಣೆ ಹತ್ತಿರ ಬರುತ್ತಿದೆ, ನನಗೂ 75 ವರ್ಷ ತುಂಬುತ್ತಿದೆ, ಇದು ಕಾಕತಾಳೀಯ ಅಷ್ಟೇ. ಇದು ನನ್ನ ಶಕ್ತಿ ಪ್ರದರ್ಶನವಲ್ಲ. ಇನ್ನು ಡಿಕೆ ಶಿವಕುಮಾರ್ ಅವರ ಅಭಿಪ್ರಾಯ ಹೇಳಿದ್ದಾರೆ. ಅವರ ಮಾತಿಗೂ ನಮ್ಮ ಗೌರವವಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.