Oct 13, 2020, 1:45 PM IST
ಬೆಂಗಳೂರು (ಅ. 13): ಖಾತೆ ಬದಲಾವಣೆ ಮುನಿಸು ಮುಗಿದ ಮೇಲೆಯೂ ಶ್ರೀರಾಮುಲು-ಸುಧಾಕರ್ ಒಬ್ಬರಿಗೊಬ್ಬರು ಟಾಂಗ್ ಕೊಟ್ಟಿದ್ದಾರೆ. ಒಬ್ಬರನ್ನೊಬ್ಬರು ಹೊಗಳಿದ್ರಾ? ತೆಗಳಿದ್ರಾ? ಕಾಲೆಲೆದರಾ? ಗೊತ್ತಾಗ್ತಾ ಇಲ್ಲ.
ಖಾತೆ ಬದಲಾವಣೆ ಹೈಡ್ರಾಮ; ಶ್ರೀರಾಮುಲು ಮನವೊಲಿಸ್ತಾರಾ ಸಿಎಂ?
'ಸ್ವತಃ ವೈದ್ಯರಾಗಿರುವುದರಿಂದ ಡಾ. ಸುಧಾಕರ್ ಚೆನ್ನಾಗಿ ಕೆಲಸ ಮಾಡುತ್ತಾರೆ. ಅವರಿಗೆ ಉಸ್ತುವಾರಿ ವಹಿಸಿದ ನಂತರ 1 ಸಾವಿರ ಇದ್ದ ಕೇಸ್‌ಗಳು ಈಗ 5 ಸಾವಿರ ಕೇಸ್‌ಗಳು ದಾಟಿವೆ. ಹಾಗಂತ ಸುಧಾಕರ್ ವಿಫಲರಾಗಿದ್ದಾರೆ ಎಂದರ್ಥವಲ್ಲ ಎಂದು ಶ್ರೀರಾಮುಲು ಹೇಳಿದ್ರೆ, 'ಆರೋಗ್ಯ ಇಲಾಖೆಯಲ್ಲಿ ಸಮನ್ವಯತೆ ಇರಲಿಲ್ಲ. ಸಿಬ್ಬಂದಿಗಳಲ್ಲಿ ಸಮನ್ವಯತೆ ಕೊರತೆ ಇತ್ತು. ಹಾಗಾಗಿ ಖಾತೆ ಬದಲಾವಣೆ ಮಾಡಲಾಯ್ತು' ಎಂದು ಸುಧಾಕರ್ ಹೇಳಿದ್ದಾರೆ.