Oct 13, 2020, 1:18 PM IST
ಬೆಂಗಳೂರು (ಅ. 13): ಆರೋಗ್ಯ ಖಾತೆಯನ್ನು ಶ್ರೀರಾಮುಲು ಅವರಿಂದ ಸುಧಾಕರ್‌ಗೆ ಕೊಟ್ಟಿದ್ದರಿಂದ ಶ್ರೀರಾಮುಲುಗೆ ಅಸಮಾಧಾನ ಉಂಟಾಗಿದೆ. ಖಾಸಗಿ ಕಾರಿನಲ್ಲೇ ಓಡಾಡುತ್ತಿದ್ದಾರೆ. ಇಂದು ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ಧಾರೆ.
ಖಾತೆ ಬದಲಾವಣೆ ; ಸಿಎಂ ಮುಂದೆ ಶ್ರೀರಾಮುಲು ಹೊಸ ಪಟ್ಟು
ಸಮಾಜ ಕಲ್ಯಾಣ ಖಾತೆ ಜೊತೆ ಹಿಂದುಳಿದ ವರ್ಗ ಖಾತೆಯನ್ನೂ ನಮಗೆ ಕೊಡಿ ಎಂದು ಶ್ರೀರಾಮುಲು ಪಟ್ಟು ಹಿಡಿದು ಕುಳಿತಿದ್ದಾರೆ. ಶ್ರೀರಾಮುಲು ಅವರ ಮನವೊಲಿಸಲು ಸಿಎಂ ಕೂಡಾ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ ಅಂತೂ ನಡೆಯುತ್ತಿದೆ.