ಅಕ್ಕಿ ಬದಲು ಖಾತೆಗೆ ಹಣ, ಕಾಂಗ್ರೆಸ್ ನಡೆ ಪ್ರಶ್ನಿಸಿದ ಬಿಜೆಪಿ ಬಣ!

Jun 29, 2023, 11:24 PM IST

ರಾಜ್ಯದಲ್ಲಿ ಅಕ್ಕಿ ರಾಜಕೀಯ ಜೋರಾಗಿದೆ. ಉಚಿತ 5 ಕೆಜಿ ಅಕ್ಕಿ ನೀಡುವ ಕಾಂಗ್ರೆಸ್ ಸರ್ಕಾರ ಕೊನೆಗೂ ಸೂತ್ರವೊಂದನ್ನು ಮುಂದಿಟ್ಟಿದೆ. ಅಕ್ಕಿ ಬದಲು ಖಾತೆಗೆ ಹಣ ಹಾಕುವ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಕಾಂಗ್ರೆಸ್ ಈ ನಡೆಯನ್ನು ಬಿಜೆಪಿ ಪ್ರಶ್ನಿಸಿದೆ. ಮಾರುಕಟ್ಟೆಯಲ್ಲಿರುವ ಬೆಲೆ ನೀಡಿ. ಇಷ್ಟೇ ಕಾಂಗ್ರೆಸ್ 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದೆ. ಹೀಗಾಗಿ 10 ಕೆಜಿಯ ಮಾರುಕಟ್ಟೆ ಬೆಲೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಅಕ್ಕಿ ಇಲ್ಲದ ಕಾರಣ ನಾವು ಹಣಕೊಡುತ್ತಿದ್ದೇವೆ. ಅಕ್ಕಿ ಕೊಡದಿದ್ದರೆ ಹಣ ಕೊಡಿ ಎಂದು ಬಿಜೆಪಿ ಹೇಳಿತ್ತು. ಇದೀಗ ನಾವು ಹಣ ಕೊಡುತ್ತೇವೆ ಎಂದಾಗ ಟೀಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ.