ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಬಂಧನ ರಾಜಕೀಯವಾಗಿ ಪರ- ವಿರೋಧ ಚರ್ಚೆಯಾಗುತ್ತಿದೆ.
ಬೆಂಗಳೂರು (ನ. 05): ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಬಂಧನ ರಾಜಕೀಯವಾಗಿ ಪರ- ವಿರೋಧ ಚರ್ಚೆಯಾಗುತ್ತಿದೆ.
'ಈ ಕೇಸ್ ನಡೆಯುತ್ತಿರುವುದು ರಾಜಕೀಯ ಪ್ರೇರಿತ. ನಾನೇನು ತಪ್ಪು ಮಾಡಿಲ್ಲ ಎಂದು ಕುಲಕರ್ಣಿ ನನ್ನ ಬಳಿ ಹೇಳಿದ್ದರು. ವಿಚಾರಣೆ ನಡೆಯುತ್ತಿದೆ. ನಾನು ಏನೂ ಹೇಳೋಕೆ ಹೋಗುವುದಿಲ್ಲ. ವಿಚಾರಣೆ ನಡೆಯಲಿ. ಇದು ಮುಗಿದು ಹೋಗಿರುವ ಕೇಸ್. ಇದನ್ನು ಮತ್ತೆ ರೀ ಓಪನ್ ಮಾಡಿ ಸಿಬಿಐಗೆ ಕೊಟ್ಟು ವಿಚಾರಣೆ ಮಾಡಬೇಕಾಗಿರುವ ಅಗತ್ಯ ಇರಲಿಲ್ಲ. ಹಾಗಾಗಿ ಇದು ರಾಜಕೀಯ ಪ್ರೇರಿತ' ಎಂದು ಸಿದ್ದು ಹೇಳಿದ್ದಾರೆ.