ಹೈಕಮಾಂಡ್‌ ಮಟ್ಟದಲ್ಲಿ ನಡೆಯಿತು ರಹಸ್ಯ ಒಪ್ಪಂದ, ಅಧಿಕಾರ ಹಂಚಿಕೆಗೆ ಒಪ್ಪಿದ ನಾಯಕರು!

May 18, 2023, 11:40 PM IST

ಬೆಂಗಳೂರು (ಮೇ.18): ಐದು ದಿನಗಳ ಸಿಎಂ ಆಯ್ಕೆ ಪ್ರಹಸನಕ್ಕೆ ದೆಹಲಿಯಲ್ಲಿ ತೆರೆಬಿದ್ದಿದೆ. ಸಿದ್ಧರಾಮಯ್ಯ ಅವರು ಸಿಎಂ ಆಗಿ ಆಯ್ಕೆಯಾಗಿದ್ದರೆ, ಡಿಕೆಶಿ ಡಿಸಿಎಂ ಆಗಿ ನಿಯೋಜಿತರಾಗಿದ್ದಾರೆ. ಅಧಿಕಾರ ಹಂಚಿಕೆಯ ಸೂತ್ರಕ್ಕೆ ಉಭಯ ನಾಯಕರು ಒಪ್ಪಿದ್ದಾರೆ.

ದೆಹಲಿಯಲ್ಲಿ ಸತತ ಐದು ದಿನಗಳ ಕಾಲ ನಡೆದ ಚರ್ಚೆಯಲ್ಲಿ ಯಾರಿಗೆ ಏನೆಲ್ಲಾ ಅಧಿಕಾರ ಸಿಕ್ಕಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಮೊದಲ ಎರಡು ವರ್ಷ ಸಿದ್ಧರಾಮಯ್ಯಗೆ ಪಟ್ಟ ಸಿಕ್ಕಿದ್ದರೆ, ನಂತರದ ಮೂರು ವರ್ಷ ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ವರದಿಯಾಗಿದೆ. ಇನ್ನು ಡಿಕೆ ಶಿವಕುಮಾರ್‌ ಹಾಗೂ ಸಿದ್ಧರಾಮಯ್ಯ ನಡುವೆ ಅಧಿಕಾರ ಹಂಚಿಕೆ ರಹಸ್ಯವಾಗಿ ನಡೆದಿದೆ. ಇದರ ಬಗ್ಗೆ ಇಬ್ಬರೂ ಸಣ್ಣ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. ಡಿಸಿಎಂ ಜೊತೆಗೆ ಇಂಧನ ಹಾಗೂ ನೀರಾವರಿ ಇಲಾಖೆಯನ್ನು ಡಿಕೆಶಿ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಸರ್ಕಾರ ರಚನೆಗೆ ಸಿದ್ದರಾಮಯ್ಯಗೆ ಗ್ರೀನ್‌ ಸಿಗ್ನಲ್‌ ನೀಡಿದ ರಾಜ್ಯಪಾಲರು: ನಾಳಿದ್ದು ಪ್ರಮಾಣವಚನ

ದೆಹಲಿಯಿಂದ ಬಂದ ಬೆನ್ನಲ್ಲಿಯೇ ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿ ಕಾಂಗ್ರೆಸ್‌ನ ಶಾಸಕಾಂಗ ಸಭೆ ನಡೆಯಿತು. ಇದರಲ್ಲಿ ಸಿದ್ಧರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ಧರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಅದರ ಬೆನ್ನಲ್ಲಿಯೇ ರಾಜಭವನಕ್ಕೆ ನಾಯಕರು ಭೇಟಿ ನೀಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ.