ಅನರ್ಹರನ್ನು ಬಗ್ಗು ಬಡಿಯಲು ಸಿದ್ದರಾಮಯ್ಯ ಸೇನೆ ರೆಡಿ! ಯಾರ್ಯಾರಿದ್ದಾರೆ ನೋಡಿ

Nov 7, 2019, 2:36 PM IST

ಬೆಂಗಳೂರು (ನ.07): ರಾಜ್ಯದ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಇನ್ನೊಂದೂ ತಿಂಗಳು ಬಾಕಿ ಉಳಿದಿಲ್ಲ. ಒಂದು ಕಡೆ 17 ಶಾಸಕರ ಅನರ್ಹತೆ ಕುರಿತಾದ ಅರ್ಜಿ ಸುಪ್ರೀಂ ಕೋರ್ಟಿನ ಅಂಗಳದಲ್ಲಿದೆ.

ಇನ್ನೊಂದು ಕಡೆ ಸರ್ಕಾರ ಪತನಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ಪಾಠ ಕಲಿಸಲು ಕಾಂಗ್ರೆಸ್ ರಣತಂತ್ರಗಳನ್ನು ರೂಪಿಸುತ್ತಲೇ ಇದೆ. ಆ ತಂತ್ರಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಈಗ ಸಿದ್ದರಾಮಯ್ಯ ಅದಕ್ಕಾಗಿಯೇ ತನ್ನ ಆಪ್ತರನ್ನು ಸೇರಿಸಿ ಹೊಸ ಸೇನೆಯೊಂದನ್ನು ರೆಡಿ ಮಾಡಿದ್ದಾರೆ.

ಕಳೆದ ಜೂನ್ ತಿಂಗಳಿನಲ್ಲಿ ನಡೆದ ರಾಜಕೀಯ ಹೈಡ್ರಾಮದಲ್ಲಿ ಆಡಳಿತರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ 17 ಶಾಸಕರು ರಾಜೀನಾಮೆ ನೀಡಿದ್ದರು. ಮುಂದೆ ನಡೆದ ಬೆಳವಣಿಗೆಯಲ್ಲಿ ಅನರ್ಹತೆಗೆ ಗುರಿಯಾಗಿದ್ದರು. ಡಿ.05ರಂದು ಅವುಗಳ ಪೈಕಿ 15 ಕ್ಷೇತ್ರಗಳಿಗೆ ಉಪ-ಚುನಾವಣೆ ನಡೆಯಲಿದ್ದು, ಡಿ.09ಕ್ಕೆ ಮತ ಎಣಿಕೆ ನಡೆಯಲಿದೆ.