Sep 15, 2022, 10:35 PM IST
ಕಲಾಪದಲ್ಲಿ ರಾಜಕಾಲುವೆ ಒತ್ತುವರಿ, ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಸೇರಿದಂತೆ ಹಲವು ಗಂಭೀರ ವಿಷಯಗಳ ಕುರಿತು ಚರ್ಚೆ, ಗದ್ದಲ, ಗಲಾಟನೆ ನಡೆದಿದೆ. ಇದರ ನಡುವೆ ಆರ್ ಅಶೋಕ್ ತಪ್ಪು ಉಚ್ಚಾರಕ್ಕೆ ಸಿದ್ದರಾಮಯ್ಯ ಕನ್ನಡದ ವ್ಯಾಕರಣ ಪಾಠ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಆರ್ ಅಶೋಕ್ ಇದು ಬೆಂಗಳೂರು ಭಾಷೆ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಮೈಸೂರು ಬೆಂಗಳೂರು ಭಾಷೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಸರಿಯಾಗಿ ಉಚ್ಚಾರ ಮಾಡಿ ಎಂದು ಸಿದ್ದು ಪಾಠ ಮಾಡಿದ್ದಾರೆ. ಈ ವಿಡೀಯೋ ವೈರಲ್ ಆಗಿದೆ.