Oct 31, 2019, 6:27 PM IST
ಮಂಡ್ಯ (ಅ.31): ಮಂಡ್ಯದಲ್ಲಿ ಅಪರೂಪದ ಬೆಳವಣಿಗೆಯೊಂದು ಘಟಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ‘ಮಂಡ್ಯ ಸಂಸದೆ’ ಸುಮಲತಾ ಮೊದಲ ಬಾರಿಗೆ ಮುಖಾಮುಖಿಯಾದರು.
ಮಳಿಗೆಯೊಂದರ ಉದ್ಘಾಟನೆ ಸುಮಲತಾ ಅಂಬರೀಷ್, ಸಿದ್ದರಾಮಯ್ಯರಿಗೆ ಕಾದ ಘಟನೆ ನಡೆದಿದೆ. ಬಳಿಕ ಮುಖಾಮುಖಿಯಾದ ಅವರಿಬ್ಬರು ಒಂದೇ ವೇದಿಕೆಯನ್ನು ಹಂಚಿಕೊಂಡರು. ಮುಂದೇನಾಯ್ತು? ಈ ಸ್ಟೋರಿ ನೋಡಿ....
ಅಂಬರೀಷ್ ನಿಧನದ ಬಳಿಕ, ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸುಮಲತಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡ ಕಾರಣ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಕಣಕ್ಕಿಳಿದಿದ್ದರು. ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದ್ದರು.