ಜೆಡಿಎಸ್‌ ಸೋಲಿಸುವಲ್ಲಿ ಸಿದ್ದರಾಮಯ್ಯ ಸಕ್ಸಸ್; ಕಾಂಗ್ರೆಸ್‌ ತೆಕ್ಕೆಗೆ ಕೆಲ ಶಾಸಕರು?

Jun 10, 2022, 4:15 PM IST

ಬೆಂಗಳೂರು, (ಜೂನ್.10): ಕರ್ನಾಟಕ ರಾಜ್ಯಸಭೆ ಚುನಾವಣೆಗೆ ಮತದಾನ ನಡೆದಿದೆ. ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್‌ನ ಜೈರಾಮ್ ರಮೇಶ್ ಅವರು ಗೆಲ್ಲುವುದು ಪಕ್ಕಾ. ಆದ್ರೆ, ನಾಲ್ಕನೇ  ಅಭ್ಯರ್ಥಿ ಗೆಲ್ಲೋದು ಯಾರು? ಎನ್ನುವ ಕುತೂಹಲ ಮೂಡಿಸಿದೆ.

ಕುಮಾರಸ್ವಾಮಿ ಗೆಳೆಯರ ಬಳಗವೇ ಶತ್ರು ವರ್ತುಲಚವಾಗಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಜೆಡಿಎಸ್‌ಗೆ ಟಕ್ಕರ್ ಕೊಡಲೇಬೇಕೆಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ಮಾತಿಗೂ ಸೊಪ್ಪು ಹಾಕದೇ ದಿಢೀರ್ ಎರಡನೇ ಅಭ್ಯರ್ಥಿಯನ್ನಾಗಿ ಮನ್ಸೂರ್ ಅಲಿ ಖಾನ್ ಆವರನ್ನ ಕಣಕ್ಕಿಳಿಸಿದ್ದಾರೆ. ಇದು ದಳಪತಿಗಳೀಗೆ ನುಂಗಲಾರದ ತುತ್ತಾಗಿಪರಿಣಮಿಸಿದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರು ಕೆಲ ಜೆಡಿಎಸ್ ಶಾಸಕರಿಗೆ ಗಾಳ ಹಾಕಿದ್ದಾರೆ.   ಜೆಡಿಎಸ್‌ ಸೋಲಿಸುವಲ್ಲಿ ಸಿದ್ದರಾಮಯ್ಯ ಸಕ್ಸಸ್; ಕಾಂಗ್ರೆಸ್‌ ತೆಕ್ಕೆಗೆ ಕೆಲ ಶಾಸಕರು?