ಮಾಜಿ ಸಿಎಂ ಸಿದ್ದರಾಮಯ್ಯ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾ, ಮಾತಿನ ಅದ್ವಾನದಿಂದ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಬೆಂಗಳೂರು (ಡಿ. 03): ಮಾಜಿ ಸಿಎಂ ಸಿದ್ದರಾಮಯ್ಯ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾ, ಮಾತಿನ ಅದ್ವಾನದಿಂದ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಹಿಂದೂ - ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಬಹಳ ಜನ ಇದ್ದಾರೆ ಎಂದು ಹೇಳಿ ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆ. ಸಿದ್ದರಾಮಯ್ಯನವರ ಈ ಮಾತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಾತಿಗೆ ಈಶ್ವರಪ್ಪ ಕೊಟ್ಟಿರುವ ತಿರುಗೇಟು, ಸಿದ್ದರಾಮಯ್ಯನವರೇ ಮುಟ್ಟಿಕೊಳ್ಳುವಂತಿದೆ.
ಕ್ರಾಸ್‌ಬ್ರೀಡ್ ಎಂಬ ಪದ ಉಪಯೋಗಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕು. ಲವ್ ಜಿಹಾದ್‌ಗೆ ಸಂಬಂಧಿಸಿದ ಕಾಯ್ದೆ ಜಾರಿಯಾಗುವ ಮೊದಲೇ ಬಾಯಿಗೆ ಬಂದಂತೆ ಅವರು ನೀಡುತ್ತಿರುವ ಹೇಳಿಕೆ ಅಯೋಗ್ಯತನದಿಂದ ಕೂಡಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಮುಸ್ಲಿ ವ್ಯಕ್ತಿಯನ್ನು, ಸೋನಿಯಾ ಗಾಂಧಿ ಮತ್ತೊಂದು ಜಾತಿಯವರನ್ನು, ಪ್ರಿಯಾಂಕ ಕ್ರಿಶ್ಚಿಯನ್ ಯುವಕನನ್ನು ವಿವಾಹವಾಗಿದ್ದಾರೆ. ಹಾಗಾದರೆ ಇವರೆಲ್ಲರೂ ಕ್ರಾಸ್‌ಬೀಡ್‌ಗಳೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.