Jan 22, 2022, 8:23 PM IST
ಬೆಂಗಳೂರು(ಜ.22): ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಇಂಧನ ಸಚಿವರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ದರ , ಕುಡಿಯುವ ನೀರಿನ ದರ ಏರಿಕೆ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ವಾರಾಂತ್ಯ ಕರ್ಫ್ಯೂ ವಾಪಸ್ ಪಡೆದಿದ್ದಾರೆ ಈಗ ತೆರಿಗೆ ಹೆಚ್ಚಿಸುವುದು ಸರಿಯಲ್ಲ. ಕಾರ್ಪೋರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹಾಕಿ. ಜನಸಾಮಾನ್ಯರ ಮೇಲೆ ಅಲ್ಲ. ಕೊರೊನಾದಿಂದ ಈಗಾಗಲೇ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ.
Karnataka Politics ಯಾಕ್ ನೀನ್ ಸೋತಿಲ್ವಾ, ನಿಮ್ಮಪ್ಪ ಸೋತಿಲ್ವಾ, ನಿನ್ ಮಗ ಸೋತಿಲ್ವಾ, ಎಚ್‌ಡಿಕೆಗೆ ಸಿದ್ದು ಗುದ್ದು
ಸಣ್ಣಪುಟ್ಟ ಆದಾಯ ಇರುವವರು ಜೀವನಕ್ಕೆ ಏನು ಮಾಡಬೇಕು. ವಿದ್ಯುತ್ ದರ ಎರಡನೇ ಸಲ ಏರಿಕೆ ಮಾಡಿದ್ದಾರೆ. ನೀರಿನ ದರ ಏರಿಸಿದ್ದಾರೆ, ಮನೆ ತೆರಿಗೆ ಹೆಚ್ಚಿಸಿದ್ದಾರೆ. ಬಹಳಷ್ಟು ಜನರು ದಿನನಿತ್ಯ ವ್ಯಾಪಾರ ಮಾಡಿ ಬಂದು ಅದರಲ್ಲಿ ಬಂದಂತಹ ಆದಾಯವನ್ನೇ ದಿನವೊಂದಕ್ಕೆ ಖರ್ಚು ಮಾಡಿ ಜೀವನ ಮಾಡುವವರಾಗಿದ್ದಾರೆ. ಇವರೆಲ್ಲ ಎಲ್ಲಿಂದ ಇಷ್ಟೊಂದು ಏರಿಕೆಯಾದ ಬಿಲ್ ಕಟ್ಟುತ್ತಾರೆ ಎಂದು ಪ್ರಶ್ನಿಸಿದ್ದು, ದರ ಏರಿಕೆ ಮಾಡಬಾರದು ಎಂದಿದ್ದಾರೆ.