ಹಳ್ಳಿ ಸಿದ್ದರಾಮಯ್ಯ, ದಿಲ್ಲಿಯಲ್ಲಿ ದರ್ಬಾರ್; ಅಹಿಂದ ನಾಯಕನಿಗೆ ಜೈಹೋ ಎಂದ ರಾಹುಲ್ ಗಾಂಧಿ!

ಹಳ್ಳಿ ಸಿದ್ದರಾಮಯ್ಯ, ದಿಲ್ಲಿಯಲ್ಲಿ ದರ್ಬಾರ್; ಅಹಿಂದ ನಾಯಕನಿಗೆ ಜೈಹೋ ಎಂದ ರಾಹುಲ್ ಗಾಂಧಿ!

Published : Jul 27, 2025, 07:45 PM IST

ಕಾಂಗ್ರೆಸ್ ಹೈಕಮಾಂಡ್, ಹಿಂದೆ ಪ್ರಾದೇಶಿಕ ನಾಯಕರನ್ನು ಮೂಲೆಗುಂಪು ಮಾಡಿದ್ದರೂ, ಈಗ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಚುನಾವಣಾ ತಂತ್ರ ರೂಪಿಸಿದೆ. ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು 'ಸ್ಟಾರ್ ಐಕಾನ್' ಎಂದು ಕರೆದಿದ್ದಾರೆ.

ಉತ್ತರದಲ್ಲಿ ದಕ್ಷಿಣ ಪಥೇಶ್ವರನಿಗೆ ಜೈಹೋ ಎನ್ನಲಾಗುತ್ತಿದೆ. ಕಾಂಗ್ರೆಸ್‌ನ ಹೈಕಮಾಂಡ್ ಹಳ್ಳಿಯ ಸಿದ್ದರಾಮಯ್ಯ ಅವರಿಗೆ ದಿಲ್ಲಿಯಲ್ಲಿ ಜೈಕಾರ ಕೂಗಿ ದರ್ಬಾರ್ ನಡೆಸಲು ವೇದಿಕೆ ಕೊಡುತ್ತಿದ್ದಾರೆ. ರಾಹುಲ್ ಗಾಂಧಿ ಘಟಾನುಘಟಿ ನಾಯಕರನ್ನು ಮನೆಗಟ್ಟಿದ್ದರೂ ದಕ್ಷಿಣದ ಈ ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕುತ್ತಿರುವುದೇ ಎನ್ನುವುದರ ಮಾಹಿತಿ ಇಲ್ಲಿದೆ. ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ದೇಶದಲ್ಲಿ ಚುನಾವಣೆಯಲ್ಲಿ ಮತವನ್ನು ಸೆಳೆಯಲು ದೊಡ್ಡ ತಂತ್ರವನ್ನೇ ರೂಪಿಸಿದೆ.
ಕರ್ನಾಟಕದ ಬಲಿಷ್ಠ ಪ್ರಾದೇಶಿಕ ಪಕ್ಷದ ನಾಯಕನಾಗಿದ್ದ

1980ರ ದೇವರಾಜು ಅರಸು, 1990 ವೀರೇಂದ್ರ ಪಾಟೀಲ್, 1992 ಎಸ್. ಬಂಗಾರಪ್ಪ ಸೇರಿದಂತೆ ರಾಜ್ಯ ರಾಜಕಾರಣದ ಈ ಮೂವರು ಮಾಸ್ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಮುಲಾಜಿಲ್ಲದೇ ಸಿಎಂ ಪದವಿ ಕಿತ್ತುಕೊಂಡು ಮನೆಗಟ್ಟಿತ್ತು. ಇಂದಿರಾಗಾಂಧಿ ಅವರು 1980ರಲ್ಲಿ ದೇವರಾಜು ಅರಸು ಅವರನ್ನು ಕೆಳಗಿಳಿಸಿ ಆರ್.ಗುಂಡೂರಾವ್ ಅವರನ್ನು ಸಿಎಂ ಮಾಡುತ್ತಾರೆ. 1990ರಲ್ಲಿ ವೀರೇಂದ್ರ ಪಾಟೀಲ್ ಅವರನ್ನು ಕೆಳಗಿಳಿಸಿದ ರಾಜೀವ್ ಗಾಂಧಿ ಅವರು ಬಂಗಾರಪ್ಪ ಅವರನ್ನು ಸಿಎಂ ಮಾಡುತ್ತಾರೆ. 1992ರಲ್ಲಿ ಬಂಗಾರಪ್ಪ ಅವರನ್ನು ಕೆಳಗಿಳಿಸಿದ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ವೀರಪ್ಪ ಮೊಯ್ಲಿ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೆ. ಇದೇ ರೀತಿ ಕಾಂಗ್ರೆಸ್ ಹೈಕಮಾಂಡ್ ಹಲವು ನಾಯಕರನ್ನು ಮುಲಾಜಿಲ್ಲದೇ ಪದಚ್ಯತಿ ಮಾಡಿತ್ತು. ಕಾಂಗ್ರೆಸ್ ಹೈಕಮಾಂಡ್ ಯಾವುದೇ ಪ್ರಾದೇಶಿಕ ನಾಯಕರನ್ನು ಬೆಳೆಯಲು ಬಿಡುವುದಿಲ್ಲ ಎಂಬ ಮಾತುಗಳು ಇರುವಾಗ, ಇದೀಗ ರಾಹುಲ್ ಗಾಂಧಿ ಅವರು ಕರ್ನಾಟಕದ ಪ್ರಾದೇಶಿಕ ನಾಯಕ ಸಿದ್ದರಾಮಯ್ಯ ಅವರನ್ನು ತಮ್ಮ ಕಾಂಗ್ರೆಸ್ ಸೈನ್ಯದ ಮುಂದೆ ತಂದು ನಿಲ್ಲಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಮುಂದಿಟ್ಟುಕೊಂಡು ಮುಂದಿನ ಚುನಾವಣೆಗೆ ದೊಡ್ಡ ತಂತ್ರವನ್ನೇ ಕಾಂಗ್ರೆಸ್ ಹೂಡಿದೆ. ದೆಹಲಿಯಲ್ಲಿ ನಡೆದ ಭಾಗೀದಾರ್ ನ್ಯಾಯ್ ಒಬಿಸಿ ಸಮಾವೇಶದ ವೇದಿಕೆಯಲ್ಲಿ ದೇಶದ ಘಟಾನುಘಟಿ ಕಾಂಗ್ರೆಸ್ ನಾಯಕರಿದ್ದರು. ಆದರೆ, ಅದರಲ್ಲಿ ಮುಖ್ಯ ಆಕರ್ಷಣೆ ಆಗಿದ್ದು ಮಾತ್ರ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ವೇದಿಕೆಯಲ್ಲಿ ಮಾತನಾಡಿದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಂತಹ 25ರಿಂದ 40 ನಾಯಕರು ಸಿಕ್ಕಿದರೆ ಇಡೀ ರಾಷ್ಟ್ರದ ರಾಜಕಾರಣದ ದಿಕ್ಕನ್ನೇ ಬದಲಿಸಬಹುದು ಎಂದು ಹೇಳಿದ್ದಾರೆ. ಇವರು ನಮ್ಮ ಕಾಂಗ್ರೆಸ್ ಪಕ್ಷದ ಸ್ಟಾರ್ ಐಕಾನ್ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ದೇಶದಲ್ಲಿ ಒಬಿಸಿ ಸಮುದಾಯದಲ್ಲಿ ಮುಖ್ಯಮಂತ್ರಿ ಪದವಿಗೇರಿದ ಒಬ್ಬರೇ ಒಬ್ಬ ನಾಯಕರೆಂದರೆ ಅದು ಸಿದ್ದರಾಮಯ್ಯ ಮಾತ್ರ.

24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
Read more