ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ: ಕಾಂಗ್ರೆಸ್‌ನ ಮಡಿಕೇರಿ ಚಲೋ ರದ್ದು!

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ: ಕಾಂಗ್ರೆಸ್‌ನ ಮಡಿಕೇರಿ ಚಲೋ ರದ್ದು!

Published : Aug 23, 2022, 02:59 PM IST

ಕೊಡಗು ಪ್ರವಾಸದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ  ವಿರೋಧಿಸಿ ಹಿಂದುಳಿದ ವರ್ಗಗಳ ವೇದಿಕೆ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ರದ್ದುಗೊಂಡಿದೆ.

ಕೊಡಗು ಪ್ರವಾಸದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿತ್ತು. ಹೀಗಾಗಿ ಇದೇ ಆಗಸ್ಟ್ 26ರಂದು ಮೊಟ್ಟೆ ದಾಳಿ ಖಂಡಿಸಿ ಕಾಂಗ್ರೆಸ್ ಮಡಿಕೇರಿ ಚಲೋ ಹಮ್ಮಿಕೊಂಡಿತ್ತು. ಆದರೆ ಇದೀಗ ಮಡಿಕೇರಿ ಚಲೋ ರದ್ದುಗೊಂಡಿದೆ. ಪೊಲೀಸ್ ಇಲಾಖೆ ಮಡಿಕೇರಿ ಚಲೋಗೆ ಅವಕಾಶ ನೀಡುವುದಿಲ್ಲ ಎಂದಿದ್ದು, ಕೊಡಗಿನ ಮೂರು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಕೈಗೊಂಡಿದೆ. ಮೊಟ್ಟೆ ಎಸೆತದ ಬಗ್ಗೆ ತನಿಖೆ ನಡೆದಿದ್ದು, ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುವ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ವೇದಿಕೆ ರದ್ದುಗೊಳಿಸಿದೆ.

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more