2200 ಕೋಟಿ ಭ್ರಷ್ಟಾಚಾರ: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ

Jul 3, 2020, 5:47 PM IST

ಬೆಂಗಳೂರು, (ಜುಲೈ.03): ಕೊರೋನಾ ಸಂಕಟದಲ್ಲಿಯೂ ರಾಜ್ಯ ಸರ್ಕಾರ ಹಣ ಲೂಟಿ ಹೊಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್‌ವೈ ಸರ್ಕಾರದ ಮುಂದೆ ಹೊಸ ಡಿಮಾಂಡ್ ಇಟ್ಟ ಸಿದ್ದರಾಮಯ್ಯ

 ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನೆಪದಲ್ಲಿ ಸರ್ಕಾರ ಲೂಟಿ ಮಾಡಿದ್ದು, 3,328 ಕೋಟಿ ಹಣ ಕೊರೋನಾಗೆ ಖರ್ಚು ಮಾಡಿದ್ದಾರೆ.  ಸಾನಿಟೈಜರ್, ಪಿಪಿ ಇ ಕಿಟ್, ಥರ್ಮಲ್ ಸ್ಯ್ಕಾನರ್ ನಲ್ಲಿ ಎರಡು ಪಟ್ಟು ಹಣ ನೀಡಿ ಖರೀದಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಕೊರೋನಾ ಸೋಂಕು ನಿವಾರಣೆಗೆ ಸಿಎಂ, ಪಿಎಂ ಕೇರ್ ಗೆ ಎಷ್ಟು ಹಣ ಬಂದಿದೆ ಎಂಬ ಮಾಹಿತಿ ನೀಡಬೇಕು. ಪಿಎಂ ಕೇರ್ ಗೆ ಸುಮಾರು 60ಸಾವಿರ ಕೋಟಿ ರೂಪಾಯಿ ಬಂದಿದೆ. ಪಿಎಂ ನಿಧಿಯಿಂದ ಕರ್ನಾಟಕಕ್ಕೆ ಎಷ್ಟು ಕೊಟ್ಟಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.