Apr 18, 2023, 4:54 PM IST
ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮೊಮ್ಮಗ, ಧವನ್ ರಾಕೇಶ್ ಕಾಣಿಸಿಕೊಂಡರು. ನಾಳೆ ವರುಣಾ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ. ವರುಣದಲ್ಲಿ ತಾತನ ಪರ ಮೊಮ್ಮಗ ಪ್ರಚಾರಕ್ಕಿಳಿಯಲಿದ್ದು ಮೊಮ್ಮಗನ ರಾಜಕೀಯ ಆಸಕ್ತಿ ಕಂಡು ತಾತ ಫುಲ್ ಖುಷ್ ಆಗಿದ್ದಾರೆ,. ಮಾಧ್ಯಮದ ಜತೆ ಮಾತನಾಡಿದ ಅವರು ಮೊಮ್ಮಗನ ರಾಜಕೀಯ ಆಸಕ್ತಿ ನೋಡಿ ಖುಷಿ ಆಗುತ್ತೆ ಚಾಮುಂಡೇಶ್ವರಿ, ವರುಣವನ್ನು ರಾಕೇಶ್ ನಿರ್ವಹಿಸುತ್ತಿದ್ದರು. ರಾಕೇಶ್ ಇಡೀ ಜಿಲ್ಲೆ ನೋಡಿಕೊಳ್ಳುತ್ತಿದ್ದ, ಅಪ್ಪನ ರಕ್ತ ಅಲ್ವ?. ಅವನಾಗಿಯೇ ಇಷ್ಟಪಟ್ಟು ನನ್ನೊಂದಿಗೆ ಬಂದಿದ್ದಾನೆ. ವರುಣಕ್ಕೆ ಪ್ರಚಾರಕ್ಕೆ ಹೋಗು ಅಂತ ನಾನು ಹೇಳಲ್ಲ. ನಮ್ಮ ಮನೆಯ ಯಾರನ್ನೂ ನಾನು ಪ್ರಚಾರಕ್ಕೆ ಕರೆಯಲ್ಲ ಎಂದು ಹೇಳಿದರು.